ಬಯೋಫಾರ್ಮೆಸಿ-ಹೇರಳ ಅವಕಾಶ

7

ಬಯೋಫಾರ್ಮೆಸಿ-ಹೇರಳ ಅವಕಾಶ

Published:
Updated:

ಮೂಡುಬಿದಿರೆ: `ಪ್ರಸಕ್ತ ದಿನಗಳಲ್ಲಿ ಹಲವು ಬಯೋಫಾರ್ಮೆಸಿ ಕಂಪೆನಿಗಳು ತಲೆ ಎತ್ತುತ್ತಿವೆ. ಇದರಿಂದ ವಿಫುಲ ಉದ್ಯೋಗವಕಾಶಗಳಿದ್ದು ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಇದರ ಸದುಪಯೋಗಪಡೆದುಕೊಳ್ಳಬೇಕು~ ಎಂದು ಬೆಂಗಳೂರಿನ ಕ್ಲಿನಿಕಲ್ ಇಂಟರ್ ನ್ಯಾಶನಲ್ ಕಂಪೆನಿಯ ಹಿರಿಯ ವೈಜ್ಞಾನಿಕ ಮ್ಯಾನೇಜರ್ ಡಾ.ಎಂ.ಎನ್ ದೀಕ್ಷಿತ್ ಹೇಳಿದರು.ಆಳ್ವಾಸ್ ಪದವಿ ಕಾಲೇಜಿನ ಬಯೊ ಟೆಕ್ನಾಲಜಿ ವಿಭಾಗದ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ `ಆರೋಗ್ಯ ಮತ್ತು ಕೈಗಾರಿಕೆಯಲ್ಲಿ ಜೈವಿಕ ತಂತ್ರಜ್ಞಾನದ ದೃಷ್ಟಿಕೋನ~ ವಿಷಯದ ಮೇಲೆ ನಡೆದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಎರಡು ದಿನಗಳ ಸಮ್ಮೇಳನದಲ್ಲಿ  ಹಲವು ವಿಚಾರ ಮಂಥನಗಳು ನಡೆಯಲಿದ್ದು ಇವೆಲ್ಲಾ ಶಿಬಿರಾರ್ಥಿಗಳಿಗೆ ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದರು.ತಮಿಳುನಾಡಿನ ಪೆರುಂದರೈ ಮಹಾರಾಜ ಕೊಎಜುಕೇಶನ್ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ರಘುನಾಥನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹತ್ತು ಹಲವು ಕಂಪೆನಿಗಳು ನಡೆಸುತ್ತಿರುವ ಔಷಧಿಗಳ ಸಂಶೊಧನೆಯನ್ನು ಅತ್ಯಂತ ಗಂಭೀರವಾಗಿ ಗಮನಿಸಿ ಅದರ ಅಧ್ಯಯನ ನಡೆಸಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

 

ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಫ್ರೊ.ಕುರಿಯನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಯೊಟೆಕ್ನಾಲಜಿ ವಿಭಾಗದಿಂದ ಹೊರತಂದ `ದಾಖಲೀಕರಣ ಸಾಕ್ಷ್ಯಚಿತ್ರ~ದ ಸಿ.ಡಿ.ಯನ್ನು ಎಂ.ಎನ್.ದೀಕ್ಷಿತ್ ಬಿಡುಗಡೆ ಮಾಡಿದರು. ವಿಭಾಗದ ಮುಖ್ಯಸ್ಥ ಡಾ.ರಾಮ್ ಭಟ್, ಡಾ.ಜಯದೇವ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry