ಭಾನುವಾರ, ಮಾರ್ಚ್ 7, 2021
19 °C

ಬರಡು ನೆಲವನ್ನು ಹಸಿರಾಗಿಸಿದವರು

ಶ್ರೀಕಾಂತ್ ಭಟ್ Updated:

ಅಕ್ಷರ ಗಾತ್ರ : | |

ಬರಡು ನೆಲವನ್ನು ಹಸಿರಾಗಿಸಿದವರು

ಈ ಕಾರ್ಯ ಶುರುವಾಗಿದ್ದು 2000–01 ನೇ ಇಸವಿಯಲ್ಲಿ. ಆ ಸಮಯದಲ್ಲಿ ಈ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ! ಊರಿಗೆ ಸೇರಿದ ಗೋಮಾಳದ ಜಾಗವೇನೋ ಇತ್ತು. ಆದರೆ ಅದು ಬರಡಾಗಿ ಕಲ್ಲು ಬಂಡೆಗಳಿಂದ ಕೂಡಿತ್ತು. ಜನರು ದನಕರುಗಳಿಗೆ ಮೇವಿಲ್ಲದೆ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದರು. ಇನ್ನು ಕೆಲವರು ತಮ್ಮ ಜಾನುವಾರುಗಳನ್ನು ಮಾರಿ ಅಕ್ಕ ಪಕ್ಕದ ಊರುಗಳಿಗೆ ಕೂಲಿ ಕೆಲಸ ಹುಡುಕುತ್ತ ಹೋಗುತ್ತಿದ್ದರು. ಆ ಸಮಯದಲ್ಲಿ ಈ ಗ್ರಾಮಗಳ ಸುತ್ತಲಿರುವ ಗೋಮಾಳ ಸಂರಕ್ಷಿಸುವ ಯೋಚನೆಯನ್ನು  ಫೌಂಡೇಶನ್ ಫಾಲ್ ಇಕಾಲಜಿಕಲ್ ಸೆಕ್ಯುರಿಟಿ ಸಂಸ್ಥೆ ಬಂದು ಗ್ರಾಮಗಳಿಗೆ ವಿವರಿಸಿತು.ಮೊದಮೊದಲು ಅದನ್ನು ಅಷ್ಟಾಗಿ ಕಿವಿಗೆ ಹಾಕಿಕೊಳ್ಳದ ಜನ ಕ್ರಮೇಣ ಆ ನಿಟ್ಟಿನಲ್ಲಿ ತಮ್ಮ ಪ್ರಯತ್ನವನ್ನು ಮುಂದುವರೆಸಿದರು. ಹೀಗೆ ಸಾಗಿದ ಹಾದಿ ಗ್ರಾಮ ಮಟ್ಟದಲ್ಲಿ ಒಂದು ಸಮಿತಿಯನ್ನು ಸ್ಥಾಪಿಸಿ ತನ್ಮೂಲಕ ಸಾಮೂಹಿಕ ಭೂಮಿ ಮತ್ತು ಜಲ ಸಂಪನ್ಮೂಲಗಳ ಅಭಿವೃದ್ಧಿ ಪಡಿಸುವತ್ತ ಮುನ್ನುಡಿಯಿಟ್ಟಿತು. ಹೀಗೆ ನಿರಂತರ ಗ್ರಾಮಸಭೆಗಳನ್ನು ನಡೆಸಿ ಪಕ್ಕದ ಗೋಮಾಳ ಮತ್ತು ಅರಣ್ಯ ಭೂಮಿಯ ಅಬಿವೃದ್ಧಿಗಾಗಿ ಒಂದು ನೀಲನಕ್ಷೆಯನ್ನು ಸಿದ್ಧಪಡಿಸಿದರು.Ridge to Valley ತತ್ವದ ಅಡಿಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಕಾರ್ಯವನ್ನು ಕೈಗೊಂಡ ಜನ ಮೇಲಿನಿಂದ ಬರುತ್ತಿರುವ ನೀರನ್ನು ಅಲ್ಲಿಯೇ ತಡೆದು ನಿಲ್ಲಿಸಿದರು. ಅದೇ ರೀತಿ ಬರಡು ನೆಲದಲ್ಲಿ ಹಲವು ರೀತಿಯ ಸಸಿಗಳನ್ನು ನಾಟಿ ಮಾಡಿದರು. ಅಷ್ಟೇ ಅಲ್ಲದೇ ಅವುಗಳ ರಕ್ಷಣೆಗಾಗಿ ಕಾವಲುಗಾರರ ನೇಮಕ ಮಾಡಿದರು. ಇದೆಲ್ಲಾ ನಡೆದದ್ದು ಪಂಚಾಯತ್ ರಾಜ್ ಕಾಯ್ದೆ ಒದಗಿಸಿರುವ ಉಪಸಮಿತಿಗಳು. ಈ ಎಲ್ಲಾ ಕೆಲಸಗಳಿಗೆ ಗ್ರಾಮ ಪಂಚಾಯ್ತಿ ಈ ಸಮಿತಿಗಳಿಗೆ ಬೆನ್ನೆಲುಬಾಗಿ ನಿಂತಿತು. ಕಾಲಕಾಲಕ್ಕೆ ಗ್ರಾಮಸಭೆ, ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ ಗ್ರಾಮ ಪಂಚಾಯ್ತಿ ಈ ಉಪಸಮಿತಿಗಳಿಗೆ ತನ್ನ ಪೂರ್ಣ ಸಹಕಾರವನ್ನು ನೀಡಿತು.ಹೀಗೆ ನೋಡನೋಡುತ್ತ ಬರಡಾಗಿದ್ದ ಕಾಡು ಹಚ್ಚ ಹಸಿರಿನಿಂದ ಕಂಗೊಳಿಸಿತು. ಈಗ ಈ ಕಾಡಿನಲ್ಲಿ ಜಿಂಕೆ, ಮೊಲ, ನವಿಲುಗಳು ಕಾಣ ಸಿಗುತ್ತಿವೆ. ಬತ್ತಿದ ಬಾವಿಗಳಲ್ಲಿ ನೀರು ಕಾಣ ಸಿಗುತ್ತಿದೆ. ಅದೇ ರೀತಿ ಮೇವಿಗಾಗಿ ಮೊದಲು ಅಕ್ಕಪಕ್ಕದ ಗ್ರಾಮಗಳಿಗೆ ಹೋಗುತ್ತಿದ್ದ ಜನ ಈಗ ಮೇವನ್ನು ತಮ್ಮ ಗೋಮಾಳದಲ್ಲೇ ಪಡೆಯುತ್ತಿದ್ದಾರೆ. ಎಲ್ಲಕಿಂತ ಹೆಚ್ಚಾಗಿ ದೂರದ ಊರುಗಳಿಗೆ ಉರುವಲಿಗಾಗಿ ಹೋಗುತ್ತಿದ್ದ ಮಹಿಳೆಯರಿಗೆ ತಮ್ಮ ಊರಿನ ಪಕ್ಕದಲ್ಲಿಯೇ ಉರುವಲು ಸಿಗುತ್ತಿದೆ.ಇಷ್ಟೆಲ್ಲ ಆದರೂ ಜನರೂ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿಲ್ಲ. 2008-09 ರಿಂದ ಜಾರಿಗೆ ಬಂದ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ­ಯಡಿಯಲ್ಲಿ ಗೋಕುಂಟೆಗಳ ನಿರ್ಮಾಣ, ಸಸಿಗಳ ನಾಟಿ ಕಾರ್ಯಕ್ರಮಗಳನ್ನು ಈ ಪ್ರದೇಶದಲ್ಲಿ ಕೈಗೊಂಡಿದ್ದಾರೆ, ಕೈಗೊಳ್ಳುತ್ತಿದ್ದಾರೆ.ಈ ರೀತಿ ಸಾಧಿಸಿದ ಪ್ರಗತಿಯನ್ನು ಇನ್ನೂ ಮುಂದುವರೆಸಲು ಉತ್ಸುಕರಾಗಿರುವ ಜನ ಯರ್ರಕೊಂಡಾ ಫೆಡರೇಶನ್ ಎಂಬ ಹೆಸರಿನಡಿಯಲ್ಲಿ ಸಾಂಘಿಕವಾಗಿ ಕೆಲಸ ಮಾಡಲು ಮುನ್ನುಡಿ ಬರೆದಿವೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಸಹ ತನ್ನ ಸಹಕಾರವನ್ನು ಮುಂದುವರೆಸಿದೆ.(ಲೇಖಕರು ಫೌಂಡೇಶನ್ ಫಾರ್ ಇಕಾಲಜಿಕಲ್ ಸೆಕ್ಯುರಿಟಿಯಲ್ಲಿ ಹಿರಿಯ ಯೋಜನಾಧಿಕಾರಿ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.