ಗುರುವಾರ , ಏಪ್ರಿಲ್ 15, 2021
26 °C

ಬರದಿಂದ ಕಂಗೆಡದಿರಿ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಸತತ ಎರಡನೇ ವರ್ಷವೂ ಬರ ನಾಡನ್ನು ಕಾಡುತ್ತಿದ್ದು, ರೈತ ಸಮುದಾಯ ಕಂಗಾಲಾಗಬಾರದು. ಜನ- ಜಾನುವಾರುಗಳ ರಕ್ಷಣೆಗೆ ಸರ್ಕಾರ ಕಟಿಬದ್ಧವಾಗಿದೆ. ಬರಪೀಡಿತ ಪ್ರದೇಶಗಳಿಗೆ ಎಲ್ಲಾ ರೀತಿಯ ನೆರವು ಕೊಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.ತಾಲ್ಲೂಕಿನ ಯರಬಳ್ಳಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ನಡೆಯುತ್ತಿದ್ದ ಕಾಮಗಾರಿ ವೀಕ್ಷಿಸಿ, ನಗರದ ಕೃಷಿ ಮಾರುಕಟ್ಟೆ ಆವರಣದಲ್ಲಿನ ಗೋಶಾಲೆಗೆ ಭೇಟಿ ನೀಡಿದ ವೇಳೆ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.ಕಷ್ಟದಲ್ಲಿರುವವರು ಉದ್ಯೋಗ ಖಾತ್ರಿ ಯೋಜನೆ ಅಡಿ ದಿನಾ ಕೂಲಿ ಮಾಡಬಹುದು. ಈಗ ಕೂಲಿ ದರವನ್ನು ್ಙ 155ಕ್ಕೆ ನಿಗದಿಗೊಳಿಸಿದೆ. ವಾರಕ್ಕೊಮ್ಮೆ ಹಣ ಪಾವತಿಸುವ ವ್ಯವಸ್ಥೆ ಮಾಡಲಾಗುವುದು. ಬಿಪಿಎಲ್ ಪಡಿತರ ಚೀಟಿದಾರರಿಗೆ ಸಮರ್ಪಕವಾಗಿ ಪಡಿತರ ವಿತರಣೆ ಆಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು ಎಂದು ಹೇಳಿದರು.ವಾಣಿ ಸಕ್ಕರೆ ಕಾರ್ಖಾನೆ ನೌಕರರು ಸರ್ಕಾರದಿಂದ ತಮಗೆ ಬರಬೇಕಿರುವ ನ್ಯಾಯಬದ್ಧ ಪಾವತಿಗಳನ್ನು ಕೊಡಿಸಬೇಕು ಎಂದು ಮನವಿ ಸಲ್ಲಿಸಿದರು. ಯರಬಳ್ಳಿಯಲ್ಲಿ  ಕಂದಿಕೆರೆ ಗ್ರಾಮಸ್ಥರು ಚಳ್ಳಕೆರೆ ತಾಲ್ಲೂಕಿಗೆ ವಾಣಿವಿಲಾಸ ಜಲಾಶಯದ ನೀರನ್ನು ಕೊಳವೆ ಮಾರ್ಗದಲ್ಲಿ ಒಯ್ಯುತ್ತಿದ್ದು, ಈ ನೀರನ್ನು ತಮ್ಮ ಗ್ರಾಮಕ್ಕೂ ಕೊಡಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಶಾಸಕ ಡಿ. ಸುಧಾಕರ್, ಎನ್. ತಿಪ್ಪೇಸ್ವಾಮಿ ಹಾಜರಿದ್ದರು.ಡಿ. ಮಂಜುನಾಥ್ ಬಿಜೆಪಿಗೆ


ಮಾಜಿ ಸಚಿವ, ಪರಿಶಿಷ್ಟ ಸಮಾಜದ ಪ್ರಮುಖ ಮುಖಂಡ, ಜೆಡಿಎಸ್‌ನ ಡಿ. ಮಂಜುನಾಥ್ ಬುಧವಾರ ಬರಪ್ರದೇಶದ ವೀಕ್ಷಣೆಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನೂರಾರು ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು.ಮಾಜಿ ಸಚಿವರ ಜತೆಗೆ, ತಾ.ಪಂ. ಮಾಜಿ ಅಧ್ಯಕ್ಷ ಕೆ. ಮಂಜುನಾಥ್, ಜಿಲ್ಲಾ ಜೆಡಿಎಸ್ ಪ.ಜಾತಿ ವಿಭಾಗದ ಅಧ್ಯಕ್ಷ ಕಾಶ್ಯಾಮಯ್ಯ, ತಾ.ಪಂ. ಮಾಜಿ ಸದಸ್ಯ ಕದುರಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಿದಾನಂದಸ್ವಾಮಿ, ಅರ್ಬನ್‌ಬ್ಯಾಂಕ್ ಅಧ್ಯಕ್ಷ  ಮೊಹಮದ್‌ರಫೀಕ್, ಗ್ರಾಮ ಪಂಚಾಯ್ತಿ  ಮಾಜಿ ಅಧ್ಯಕ್ಷ ಆರ್.  ವಿಶ್ವನಾಥ್,  ಪಿ. ಮಂಜುನಾಥ್, ಬಬ್ಬೂರು ಪ್ರಕಾಶ್, ವೀರಭದ್ರಪ್ಪ, ಎಚ್.ಡಿ. ಕೃಷ್ಣಪ್ಪ ಸೇರಿದಂತೆ ನೂರಾರು ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಮಂಜುನಾಥ್ ಅವರ ಪುತ್ರ ಜಿ.ಪಂ. ಮಾಜಿ ಸದಸ್ಯ ಎಂ. ಜಗದೀಶ್ ಸುದ್ದಿಗಾರರಿಗೆ ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟಸ್ವಾಮಿ, ಸಂಸದ ಜನಾರ್ದನಸ್ವಾಮಿ, ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ, ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಸಿದ್ದೇಶ್‌ಯಾದವ್, ವೈ.ಎಸ್. ಅಶ್ವತ್ಥಕುಮಾರ್, ಎಂ.ಎಸ್. ರಾಘವೇಂದ್ರ, ಎಂ.ವಿ. ಹರ್ಷ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಸೋಮಣ್ಣ, ರಂಗನಾಥ್, ನಾಗರಾಜ್, ಪರಮೇಶ್ವರಾಚಾರ್, ಕೇಶವಮೂರ್ತಿ, ಕುಮಾರಸ್ವಾಮಿ, ಲೋಕೇಶ್ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.