ಬರಪೀಡಿತ ತಾಲ್ಲೂಕುಗಳ ಸಂಖ್ಯೆ 84ಕ್ಕೆ

6

ಬರಪೀಡಿತ ತಾಲ್ಲೂಕುಗಳ ಸಂಖ್ಯೆ 84ಕ್ಕೆ

Published:
Updated:

ಬೆಂಗಳೂರು: ರಾಜ್ಯದ ಇನ್ನೂ 14 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಶುಕ್ರವಾರ ಘೋಷಿಸಿದೆ. ಇದರಿಂದ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 84ಕ್ಕೆ ಏರಿದೆ.ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿರುವ 21 ಜಿಲ್ಲೆಗಳ ಒಟ್ಟು 70 ತಾಲ್ಲೂಕುಗಳನ್ನು ಸರ್ಕಾರ ಮಂಗಳವಾರವಷ್ಟೇ `ಬರಪೀಡಿತ~ ಪಟ್ಟಿಗೆ ಸೇರಿಸಿತ್ತು. ಆ ಪಟ್ಟಿಗೆ ಹೊಸದಾಗಿ 14 ತಾಲ್ಲೂಕುಗಳು ಸೇರಿಕೊಂಡಿವೆ.ಗೃಹ ಕಚೇರಿ `ಕೃಷ್ಣಾ~ದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು, `ಇದೇ ಜೂನ್ 1ರಿಂದ ಅಕ್ಟೋಬರ್ 3ರ ನಡುವಿನ ಅವಧಿಯಲ್ಲಿ ರಾಜ್ಯದ ಒಂಬತ್ತು ಜಿಲ್ಲೆಗಳ ವ್ಯಾಪ್ತಿಯ ಈ 14 ತಾಲ್ಲೂಕುಗಳಲ್ಲಿಯೂ ಮಳೆ ಮತ್ತು ತೇವಾಂಶದ ಕೊರತೆ ಕಂಡುಬಂದಿದೆ. ಈ ತಾಲ್ಲೂಕುಗಳ ನೀರಾವರಿ ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ ಉಳಿದ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ~ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry