ಬರಲಿದೆ ಆಶಿಖಿ 2

7

ಬರಲಿದೆ ಆಶಿಖಿ 2

Published:
Updated:

ಎರಡು ದಶಕಗಳ ಹಿಂದೆ `ಬಸ್ ಏಕ್ ಸನಮ್ ಚಾಹಿಯೇ... ಆಶಿಖಿ ಕೇ ಲಿಯೆ~ ಹಾಡನ್ನು ಹಿಂದಿ ಬಲ್ಲ ಎಲ್ಲ ಪ್ರೇಮಿಗಳೂ ಗುನುಗಿದ್ದರು. ದೇಶದ ಸಣ್ಣಪುಟ್ಟ ಹಳ್ಳಿಗಳ ಪುಡಿಯಂಗಡಿಗಳಲ್ಲೂ ಇದೇ ಚಿತ್ರದ ಹಾಡುಗಳು.

 

ಬಂಗಾಳಿ ಬಾಬು ಗಾಯಕ ಕುಮಾರ್ ಸಾನು ರಾತೋರಾತ್ ಜನಪ್ರಿಯರಾಗಿದ್ದರು. ರ‌್ಯಾಂಪ್‌ನಿಂದ ತೆರೆಗೆ ಬಂದಿದ್ದ ರಾಹುಲ್ ರಾಯ್, ಕೃಷ್ಣ ಸುಂದರಿ ಅನು ಅಗರವಾಲ್ ಸಹ ಈ ಜನಪ್ರಿಯತೆಯಲ್ಲಿ ಪಾಲುಗಳಿಸಿದ್ದರು. ನೀಳ, ಸಪೂರ ಚೆಲುವೆ, ರಾಹುಲ್ ರಾಯ್‌ನ ಬಿಳಿ ಕೋಟಿನೊಳಗೆ ಅವಿತು ನಿಂತ ಚಿತ್ರ ಎಲ್ಲೆಡೆಯೂ ರಾರಾಜಿಸುತ್ತಿತ್ತು.ಈಗ ಇದೇ ಚಿತ್ರದ ಮುಂದುವರಿದ ಭಾಗವನ್ನು ಮಹೇಶ್ ಭಟ್ ತರುತ್ತಿರುವುದಾಗಿ ತಿಳಿಸಿದ್ದಾರೆ. ಹೆಸರು `ಆಶಿಖಿ 2~. ತಾರಾಗಣವಿನ್ನೂ ತೀರ್ಮಾನವಾಗಿಲ್ಲ.ಆದರೆ ಮಹೇಶ್ ಭಟ್ ಮಾತ್ರ ಇದು ತಮ್ಮ ಆತ್ಮಕಥೆಯ ಒಂದು ಭಾಗ ಎಂದು ಬಣ್ಣಿಸಿದ್ದಾರೆ. ಇದು ಅವರ ಮೊದಲ ಪ್ರೀತಿಯ ಕತೆ. ಒಲವಿನ ಕತೆಯನ್ನು ಬೆಳ್ಳಿ ತೆರೆಗೆ ತರುವಂತೆ ಒತ್ತಾಯಿಸಿದ್ದು, ಆಗ ಗುಲ್ಷನ್ ಕುಮಾರ್.

ಅವರ ಒತ್ತಾಯದ ಮೇರೆಗೆ ಇದನ್ನು ಚಿತ್ರವನ್ನು ಸಂಗೀತಮಯಗೊಳಿಸಲಾಗಿತ್ತು. ಇದು ದಶಕಗಳವರೆಗೆ ಪ್ರೇಮಿಗಳ ಪಿಸುಮಾತಾಗಬೇಕು. ಹಾಡಾಗಬೇಕು ಎಂದು ಅವರು ಕನಸು ಕಂಡಿದ್ದರು. ಈಗ 21 ವರ್ಷಗಳ ನಂತರವೂ ಆಶಿಖಿಯ ಸಂಗೀತ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಆ ಕನಸು ನನಸಾಗಿತ್ತು ಎಂದೆಲ್ಲ ಮಹೇಶ್‌ಭಟ್ ಹೇಳಿಕೊಂಡಿದ್ದಾರೆ.ಮೋಹಿತ್ ಸೂರಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅದೇ ಕನಸು, ಆದರೆ ಕನಸುಗಾರರು ಬದಲಾಗಿದ್ದಾರೆ ಎಂದು ಮಹೇಶ್ ಭಟ್ ಟ್ವಿಟಿಸಿದ್ದಾರೆ. ಆಶಿಖಿ 2 ಅನ್ನು ಶಾಗುಪ್ತ ರಫೀಕ್ ಬರೆದಿದ್ದಾರೆ. ಇದು ರಿಮೇಕ್ ಅಲ್ಲ ಎಂದೂ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry