ಭಾನುವಾರ, ಫೆಬ್ರವರಿ 28, 2021
31 °C
ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ

ಬರಲಿವೆ 54 ಸ್ಕೈವಾಕ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಲಿವೆ 54 ಸ್ಕೈವಾಕ್‌ಗಳು

ಬೆಂಗಳೂರು:  ನಗರದ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಪಾದಚಾರಿಗಳು ಸುರ ಕ್ಷಿತವಾಗಿ ರಸ್ತೆ ದಾಟಲು 54 ಸ್ಕೈವಾಕ್‌ಗಳ ನಿರ್ಮಾಣಕ್ಕಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಡಿ ಇಟ್ಟಿದೆ.ವಾಹನಗಳ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಅಪಘಾತಗಳು ಹೆಚ್ಚು ತ್ತಿದ್ದು, ಅವುಗಳನ್ನು ತಪ್ಪಿಸಲು ಬಿಬಿಎಂಪಿ ಈ ಯೋಜನೆಗೆ ಚಾಲನೆ ನೀಡಿದೆ. ಕೆಂಪಾಪುರ ಜಂಕ್ಷನ್‌ ಬಳಿ ವಿದ್ಯಾರ್ಥಿ ನಿಯೊಬ್ಬಳು ರಸ್ತೆ ದಾಟುವಾಗ ಟ್ಯಾಂಕ ರ್‌ಗೆ ಬಲಿಯಾದ ಮೇಲೆ ಸ್ಕೈವಾಕ್‌ಗಳ ನಿರ್ಮಾಣ ಮಾಡಬೇಕೆನ್ನುವ ಕೂಗು ನಗರದಾದ್ಯಂತ ಕೇಳಿಬಂದಿತ್ತು.ಕೆಂಪಾಪುರ ಜಂಕ್ಷನ್‌ನಲ್ಲಿ ಕೊಲಂ ಬಿಯಾ ಏಷ್ಯಾ ಆಸ್ಪತ್ರೆ ಸ್ಕೈವಾಕ್‌ ನಿರ್ಮಾಣ ಮಾಡುತ್ತಿದೆ.ಪ್ರಮುಖ ಜಂಕ್ಷನ್‌ಗಳು, ಎರಡಕ್ಕಿಂತ ಹೆಚ್ಚಿನ ರಸ್ತೆಗಳು ಸಂಧಿಸುವ ಪ್ರದೇಶಗಳು ಮತ್ತು ವಿಭಜಕ ಹೊಂದಿದ ಪ್ರಮುಖ ರಸ್ತೆಗಳಲ್ಲಿ ಈ ಸ್ಕೈವಾಕ್‌ಗಳು ತಲೆ ಎತ್ತಲಿವೆ. ಹೆಚ್ಚಿನ ಅಪಘಾತ ಸಂಭ­ವಿಸು ತ್ತಿರುವ ಪ್ರದೇಶಗಳ ಕುರಿತು ಸಂಚಾರ ಪೊಲೀಸರು ನೀಡಿರುವ ಮಾಹಿತಿ ಆಧರಿಸಿ ಸ್ಥಳಗಳನ್ನು ಆಯ್ಕೆ ಮಾಡ ಲಾಗಿದೆ. ಸ್ಕೈವಾಕ್‌ ನಿರ್ಮಾಣಕ್ಕಾಗಿ ಈಗಾ ಗಲೇ ಟೆಂಡರ್‌ ಆಹ್ವಾನಿಸಲಾಗಿದ್ದು, ಜೂನ್‌ 15ರವರೆಗೆ ಕಾಲಾವಕಾಶ ನೀಡಲಾಗಿದೆ.ಟೆಂಡರ್‌ನಲ್ಲಿ ನಮೂದಿಸಿರುವ ನಿಯಮಾವಳಿ ಪ್ರಕಾರ, ಸ್ಕೈವಾಕ್‌ಗಳ ವಿನ್ಯಾಸ, ನಿರ್ಮಾಣ ಮತ್ತು 20 ವರ್ಷಗಳ ವರೆಗಿನ ನಿರ್ವಹಣೆ ಎಲ್ಲವೂ ಗುತ್ತಿಗೆ ಪಡೆಯುವ ಸಂಸ್ಥೆಗಳ ಹೊಣೆ ಯಾಗಿದೆ. ಈ ಅವಧಿಯಲ್ಲಿ ಗುತ್ತಿಗೆ ಪಡೆದ ಸಂಸ್ಥೆಗಳು ಸ್ಕೈವಾಕ್‌ ಮೇಲೆ ಜಾಹೀರಾತು ಫಲಕಗಳನ್ನು ಅಳವಡಿಸಿ ವರಮಾನ ಗಳಿಸಲು ಅವಕಾಶ ಮಾಡಿ ಕೊಡಲಾಗಿದೆ.ಸ್ಕೈವಾಕ್‌ಗಳನ್ನು 20 ವರ್ಷ ನಿರ್ವ ಹಣೆ ಮಾಡಿದ ಮೇಲೆ ಬಿಬಿಎಂಪಿಗೆ ಹಸ್ತಾಂತರ ಮಾಡಬೇಕು. ಗುತ್ತಿಗೆ ಸಂಸ್ಥೆಗೆ ಬಿಬಿಎಂಪಿ ಯಾವುದೇ ಅನುದಾನ ನೀಡುವುದಿಲ್ಲ. ಆದರೆ, ಜಾಹೀರಾತು ಫಲಕ ಅಳವಡಿಸುವ ಹಕ್ಕು ನೀಡುತ್ತದೆ ಎಂದು ಟೆಂಡರ್‌ನಲ್ಲಿ ವಿವರಿಸಲಾಗಿದೆ.ಯಾವ ಸೌಲಭ್ಯಗಳು ಇರಲಿವೆ?:  ಸ್ಕೈವಾಕ್‌ಗಳಲ್ಲಿ ಸೌರ ವಿದ್ಯುತ್‌ ಅಳವಡಿಕೆ, ಎಲೆಕ್ಟ್ರಾನಿಕ್‌ ಜಾಹೀರಾತು ಫಲಕಗಳ ಬಳಕೆ, ದೂಳು ಮತ್ತು ಮಳೆಯಿಂದ ಪಾದಚಾರಿಗಳಿಗೆ ರಕ್ಷಣೆಗೆ ಗುತ್ತಿಗೆ ಸಂಸ್ಥೆಗಳು ಆದ್ಯತೆ ನೀಡಬೇಕು. ಸ್ಕೈವಾ ಕ್‌ನ ಪ್ರತಿ ಚದರ ಮೀಟರ್‌ ವಿಸ್ತೀರ್ಣಕ್ಕೆ 500 ಕೆ.ಜಿ ಭಾರ ಹೊರುವ ಸಾಮರ್ಥ್ಯ ಇರಬೇಕು. ಎರಡೂ ಕಡೆಗಳಲ್ಲೂ ಎಲಿ ವೇಟರ್‌ ವ್ಯವಸ್ಥೆಯನ್ನು ಅದು

ಹೊಂದಿರಬೇಕು ಎಂಬ ನಿಯಮ ವಿಧಿಸಲಾಗಿದೆ.ಸ್ಕೈವಾಕ್‌ ಅಗಲ ಕನಿಷ್ಠ 10 ಅಡಿ ಇರಬೇಕು. ಅದರ ಮೇಲ್ಮೈ ಜಾರುವಂತೆ ಇರಬಾರದು. ಸ್ಕೈವಾಕ್‌ ಮಾರ್ಗದ ಮೇಲಿನ ಸೂರು ಕನಿಷ್ಠ 3.5 ಮೀಟರ್‌ ಎತ್ತರ ಇರಬೇಕು. ಹೊರಭಾಗದಲ್ಲಿ ಅಳವಡಿಸುವ ಜಾಹೀರಾತು ಫಲಕ ಮೂರು ಮೀಟರ್‌ನಷ್ಟು ಅಗಲ ಇರಬೇಕು. ಪಾದಚಾರಿಗಳಿಗೆ ರಸ್ತೆ ವೀಕ್ಷಣೆಗೆ ಅವಕಾಶ ಒದಗಿಸಬೇಕು ಎನ್ನುವ ಷರತ್ತು ಹಾಕಲಾಗಿದೆ.ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಬೇಕು. ಮಾರ್ಗದ ಎರಡೂ ಕಡೆ ಹೂದಾನಿಗಳಿಂದ ಅಲಂಕರಿಸಬೇಕು. ಕಾಫಿ ಮಷಿನ್‌ಗಳು, ಫೋನ್‌ ಬೂತ್‌ ಗಳು, ಪತ್ರಿಕೆಗಳ ಸ್ಟ್ಯಾಂಡ್‌ಗಳ ವ್ಯವಸ್ಥೆ ಯನ್ನೂ ಸ್ಕೈವಾಕ್‌ ಒಳಗೆ ಮಾಡಲು ಅವಕಾಶ ಕಲ್ಪಿಸಲಾಗಿದೆ.ಸಿ.ಸಿ ಕ್ಯಾಮೆರಾ  ಕಣ್ಗಾವಲು

ಒಂದು ವಾರದ ದತ್ತಾಂಶ ವನ್ನು ಸಂಗ್ರಹಿಸಿ ಇಡಬಲ್ಲ ಸಿ.ಸಿ ಟಿ.ವಿ ಕ್ಯಾಮೆರಾಗಳ ವ್ಯವಸ್ಥೆಯನ್ನೂ ಮಾಡಬೇಕು.

ಸ್ಕೈವಾಕ್‌ನ ಒಳಗೆ, ಅದರ ಎರಡೂ ಕಡೆಗಿರುವ ಮೆಟ್ಟಿಲು ಹಾಗೂ ಎಲಿವೇಟರ್‌ ಗಳಲ್ಲಿ ಸಿ.ಸಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆ ಮಾಡಬೇಕು ಎಂದು ನಿಯಮದಲ್ಲಿ ತಿಳಿಸಲಾಗಿದೆ.

ಸ್ಥಳ ಆಯ್ಕೆ ಹೇಗೆ?

l ಪ್ರಮುಖ ಜಂಕ್ಷನ್‌, ಎರಡ ಕ್ಕಿಂತ ಹೆಚ್ಚಿನ ರಸ್ತೆಗಳು ಸಂಧಿಸುವ ಪ್ರದೇಶಗಳು

l ವಿಭಜಕ ಹೊಂದಿದ ಪ್ರಮುಖ ರಸ್ತೆಗಳುl ಪೊಲೀಸರು ಅಪಘಾತದ ಬಗ್ಗೆ  ನೀಡಿದ ಮಾಹಿತಿ ಆಧಾರದಲ್ಲಿ ಸ್ಥಳ ಆಯ್ಕೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.