ಬರವಣಿಗೆಯಿಂದ ಭಾಷೆ ಬೆಳವಣಿಗೆ

7

ಬರವಣಿಗೆಯಿಂದ ಭಾಷೆ ಬೆಳವಣಿಗೆ

Published:
Updated:

ಪುತ್ತೂರು: `ಕಾವ್ಯವು ಭಾಷಾ ಜ್ಞಾನವನ್ನು ಸೂಕ್ಷ್ಮಗೊಳಿಸುತ್ತದೆ. ಬರ ವಣಿಗೆ ಭಾಷೆಯನ್ನು ಸದಾ ಬೆಳೆಸುತ್ತದೆ~  ಎಂದು ಹಿರಿಯ ಸಾಹಿತಿ ಡಾ.ರಾಮ ಚಂದ್ರ ದೇವ ಹೇಳಿದರು.ಪುತ್ತೂರಿನ ಅನುರಾಗ ವಠಾರದಲ್ಲಿ  ಪುತ್ತೂರು ಕರ್ನಾಟಕ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಸಂಜೆ ಆರಂಭವಾದ `ಸಾಹಿತ್ಯ -ಕಲಾ ಕುಶಲೋಪರಿ ಸಂಸ್ಕೃತಿ ಸಲ್ಲಾಪ~ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿವೇಕಾನಂದ ಕಾಲೇಜಿನ ಪ್ರಾಂಶು ಪಾಲ ಡಾ.ಮಾಧವ ಭಟ್ ಉದ್ಘಾಟಿಸಿ ದರು. ಮಂಡ್ಯದ ಭಾರತೀಯ ಕಾಲೇಜಿನ ಉಪನ್ಯಾಸಕ ಡಾ.ಎಂ.ರಾಮಕೃಷ್ಣ `ಸುಜನ ಸ್ಮರಣೆ~ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕಾರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ಕಾರ್ಯದರ್ಶಿ ಡಾ.ಎಚ್.ಜಿ.ಶ್ರೀಧರ್, ಉಪನ್ಯಾಸಕ ರಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಡಾ.ಪದ್ಮನಾಭ, ಬೆಳ್ಳಿ ಸಾಕ್ಷಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಬಂಗಾರಡ್ಕ , ಕಾವೇರಿ ಮುಳಿಯ, ವರ್ಷಾ ಮೊಳೆಯಾರ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry