ಬರಹಗಾರರಿಗೆ ಜವಾಬ್ದಾರಿ ಅಗತ್ಯ

7

ಬರಹಗಾರರಿಗೆ ಜವಾಬ್ದಾರಿ ಅಗತ್ಯ

Published:
Updated:

ಮಾನ್ವಿ: ಬರಹಗಾರರಲ್ಲಿ ಅಧ್ಯಯನಶೀಲತೆ, ಸಾಮಾಜಿಕ ಜವಾಬ್ದಾರಿ ಹಾಗೂ ಬದ್ಧತೆ ಅಗತ್ಯ. ಸಾಮಾಜಿಕ ಪರಿವರ್ತನೆಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಪರಿಣಾಮಕಾರಿ ಸಾಹಿತ್ಯ ರಚನೆಯಾದಲ್ಲಿ ಸಮಾಜದಲ್ಲಿ ಮಹತ್ವದ ಬದಲಾವಣೆ ಕಾಣಲು ಸಾಧ್ಯ ಎಂದು ಖ್ಯಾತ ಕನ್ನಡ ಶಾಯರಿ ಕವಿ  ಪ್ರೊ.ಇಟಗಿ ಈರಣ್ಣ ಹೇಳಿದರು.

ಭಾನುವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಯುವ ಕವಿ ದೇವರಾಜ ಎಸ್.ಬಪ್ಪೂರು ರಚಿಸಿದ `ಹನಿಮುತ್ತು~ ಕವನ ಸಂಕಲನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ದೇಶದ ರಾಜಕೀಯ ವ್ಯವಸ್ಥೆ ತಿದ್ದಲಾರದಂತಹ ಕೆಟ್ಟ ಪರಿಸ್ಥಿತಿಗೆ ತಲುಪಿದೆ. ಭ್ರಷ್ಟತೆ ಮೈಗೂಡಿಸಿಕೊಂಡವರು ದೊಡ್ಡವರಾಗುತ್ತಿರುವುದು ದುರಂತದ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಬರಹಗಾರರ ಜವಾಬ್ದಾರಿ ಹೆಚ್ಚಿದೆ. ಮನುಷ್ಯ ಒಳ್ಳೆಯ ವಿಚಾರಗಳಿಂದ ಗುರುತಿಸುವಂತಾಗಬೇಕು.  ಉಸಿರು ನಿಲ್ಲುವ ಮೊದಲು ಹೆಸರು ನಿಲ್ಲುವಂತಹ ಕೆಲಸ ಮಾಡಬೇಕು ಎಂದು ಇಟಗಿ ಈರಣ್ಣ ಸಲಹೆ ನೀಡಿದರು. ಹಿರಿಯ ಸಾಹಿತಿ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಹಾಗೂ ಪತ್ರಕರ್ತ ಡಿ.ಎಚ್.ಕಂಬಳಿ ಮಾತನಾಡಿ, ದೇವರಾಜ ಅವರು ತಮ್ಮ ಕವನಗಳಲ್ಲಿನ ಗಟ್ಟಿ ಸಾಹಿತ್ಯದ ಮೂಲಕ  ಭರವಸೆಯ ಕವಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಿಂಧನೂರು ಉಪವಿಭಾಗದ ಪ್ರಭಾರ ಅಂಚೆ ನಿರೀಕ್ಷಕ ಶಾಮೀದ್‌ಸಾಬ್ ಅಧ್ಯಕ್ಷತೆವಹಿಸಿದ್ದರು.

ಕವಿ ದೇವರಾಜ ಎಸ್.ಬಪ್ಪೂರು, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ, ಸಾಹಿತಿ ರಮೇಶಬಾಬು ಯಾಳಗಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ರಾಮಚಂದ್ರಪ್ಪ, ಪುರಸಭೆ ಅಧ್ಯಕ್ಷ ಹುಸೇನ್‌ಬೇಗ್ ವೇದಿಕೆಯಲ್ಲಿದ್ದರು. ಸಿಂಧುಜಾ ಪ್ರಾರ್ಥನೆ ಗೀತೆ ಹಾಡಿದರು. ಸೈಯದ್ ತಾಜುದ್ದೀನ್ ನಿರೂಪಿಸಿದರು. ಎಮ್.ನಾಗಭೂಷಣ ಸ್ವಾಮಿ ಸ್ವಾಗತಿಸಿದರು. ವೆಂಕಟೇಶ ಎಸ್.ಬಪ್ಪೂರು ಪ್ರಸ್ತಾವಿಕ ಭಾಷಣ ಮಾಡಿದರು. ವೀರೇಶ ಗೋನವಾರ ಅತಿಥಿ ಪರಿಚಯ ಮಾಡಿದರು. ಅರುಣ ವಿ.ಕಾಂತನವರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry