ಬರಾದಿ ನೇಮಕ ಅಲ್ಲಗಳೆದ ಅಧ್ಯಕ್ಷರ ಕಚೇರಿ
ಕೈರೊ (ಪಿಟಿಐ): ವಿರೋಧ ಪಕ್ಷದ ನಾಯಕ ಮೊಹಮ್ಮದ್ ಎಲ್. ಬರಾದಿ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿದೆ ಎಂಬ ವರದಿಯನ್ನು ಹಂಗಾಮಿ ಅಧ್ಯಕ್ಷರ ಕಚೇರಿಯು ಅಲ್ಲಗಳೆದಿದೆ.
ಬರಾದಿ ಅವರೇ ಪ್ರಧಾನಿ ಹುದ್ದೆಗೆ ಯೋಗ್ಯ ವ್ಯಕ್ತಿ ಎಂಬುದು ನಿಜ ಎಂದು ಅಧ್ಯಕ್ಷ ಅಡ್ಲಿ ಮನ್ಸೌರ್ ಅವರ ಸಲಹೆಗಾರ ಅಹಮದ್ ಅಲ್- ಮುಸ್ಲಿಮನಿ ಅವರು ತಿಳಿಸಿದ್ದಾರೆ.
ಪ್ರಧಾನಿ ಮತ್ತು ಇತರ ಸಚಿವರ ಹೆಸರುಗಳನ್ನು ಸೋಮವಾರ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ಪ್ರಧಾನಿ ಹುದ್ದೆಗೆ ಬೇರೆಬೇರೆ ಹೆಸರುಗಳು ಪ್ರಸ್ತಾವವಾಗಿದ್ದರೂ ಬರಾದಿ ಅವರೇ ಆ ಹುದ್ದೆಗೆ ಅಂತಿಮ ಆಯ್ಕೆಯಾಗಬಹುದು ಎಂದು ಮಸ್ಲಿಮನಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.