ಬುಧವಾರ, ಏಪ್ರಿಲ್ 14, 2021
23 °C

ಬರಿಗಣ್ಣಿಗೆ ಇಂದು ಬುಧ ಗ್ರಹ ಗೋಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸೂರ್ಯನಿಗೆ ಅತ್ಯಂತ ಸನಿಹದಲ್ಲಿರುವ ಬುಧಗ್ರಹವು ಇಂದು (ಬುಧವಾರ) ಸಂಜೆ ಆಕಾಶದಲ್ಲಿ ಪ್ರಕಾಶಮಾನವಾಗಿ ಬರಿಗಣ್ಣಿಗೆ ಕಾಣಲಿದೆ.

ಬುಧಗ್ರಹವು ಸೂರ್ಯನಿಂದ ಅತ್ಯಂತ ದೂರವಾಗುವುದರಿಂದ ಬುಧವಾರ ಸೂರ್ಯಾಸ್ತದ ನಂತರ ಆಗಸದಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ ಎಂದು ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರೊಫೆಸರ್ ಆರ್.ಸಿ.ಕಪೂರ್ ಹೇಳಿದ್ದಾರೆ.

ಸಾಮಾನ್ಯವಾಗಿ ಆಗಸದಲ್ಲಿ ಬುಧಗ್ರಹವನ್ನು ಗುರುತಿಸುವುದು ಸುಲಭವಲ್ಲ. ಆದರೆ ಬುಧವಾರ ಬುಧಗ್ರಹವು ಪೂರ್ವಕ್ಕೆ ಲಂಬವಾಗಿ ಸುಮಾರು 18 ಡಿಗ್ರಿ ಕೋನದಲ್ಲಿ ಚಲಿಸಲಿದೆ. ಹಾಗಾಗಿ ಬರಿ ಗಣ್ಣಿಗೆ ಅದು ಸ್ಪಷ್ಟವಾಗಿ ಗೋಚರಿಸಲಿದೆ’ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ದಿಕ್ಕಿನಲ್ಲಿ ಸಾಯಂಕಾಲ 6.28 ಸುಮಾರಿಗೆ ಕಾಣಲಿದೆ. ಬುಧ ಗ್ರಹದ ಕೆಳಭಾಗದಲ್ಲಿ ಗುರು ಗ್ರಹವೂ ಕಂಡು ಬರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.