ಗುರುವಾರ , ಅಕ್ಟೋಬರ್ 17, 2019
27 °C

ಬರಿಗಣ್ಣಿಗೆ ಮೂರು ಗ್ರಹಗಳ ದರ್ಶನ

Published:
Updated:

ನವದೆಹಲಿ (ಪಿಟಿಐ): ಇಂದಿನಿಂದ ಮೂರು ದಿನಗಳ ಕಾಲ ರಾತ್ರಿ ಆಗಸದತ್ತ ದೃಷ್ಟಿ ಹಾಯಿಸುವವರಿಗೆ ಅಚ್ಚರಿಯನ್ನು ವೀಕ್ಷಿಸಬಹುದು. ಭೂಮಿಯ ನೆರೆಯ ಗ್ರಹಗಳಾದ ಗುರು, ಶುಕ್ರ ಮತ್ತು ಮಂಗಳ ಗ್ರಹಗಳು ಬರಿಗಣ್ಣಿಗೆ ಗೋಚರಿಸಲಿವೆ.

ಈ ಮೂರು ಗ್ರಹಗಳು ಭೂಮಿಯ ಸಮೀಪಕ್ಕೆ ಬರುತ್ತಿದ್ದಂತೆಯೇ ಬರಿಗಣ್ಣಿಗೆ ಗೋಚರಿಸಲಿವೆ ಎಂದು ಪ್ಲಾನೆಟರಿ ಸೊಸೈಟಿ ಆಫ್ ಇಂಡಿಯಾದ ಎನ್. ರಘುನಂದನ್ ಕುಮಾರ್ ಹೇಳಿದ್ದಾರೆ.

`ಗುರು ಮತ್ತು ಮಂಗಳ ಗ್ರಹವು ಪೂರ್ವ ದಿಕ್ಕಿನಲ್ಲಿ ತಲಾ ರಾತ್ರಿ 1.30 ಮತ್ತು 11.45ರವರೆಗೆ ಕಾಣಲಿವೆ. ಶುಕ್ರ ಗ್ರಹವು ಪಶ್ಚಿಮ ದಿಕ್ಕಿನಲ್ಲಿ ರಾತ್ರಿ 8ರ ವರೆಗೆ ಗೋಚರಿಸಲಿದೆ~ ಎಂದು ಹೇಳಿದ್ದಾರೆ.

Post Comments (+)