ಬರಿದಾದ ಕೆರೆ: ಮಳೆಗೆ ಜನರ ಮೊರೆ

ಗುರುವಾರ , ಜೂಲೈ 18, 2019
22 °C

ಬರಿದಾದ ಕೆರೆ: ಮಳೆಗೆ ಜನರ ಮೊರೆ

Published:
Updated:

ಮಳವಳ್ಳಿ: ಪಟ್ಟಣದ ಸಮೀಪ ಮಾರೇಹಳ್ಳಿ ಕೆರೆ ಇದ್ದು ನೀರಿಲ್ಲದೇ ಬರಿದಾಗಿದೆ. ಈ ಕೆರೆ ಅಂದಾಜು 560 ಎಕರೆ ವಿಸ್ತೀರ್ಣ ಇದ್ದು, 2500 ಎಕರೆ ಜಮೀನಿಗೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದೆ.ಪಟ್ಟಣದಿಂದ ಪೂರಿಗಾಲಿಗೆ ಹೋಗುವ ರಸ್ತೆಯಲ್ಲಿ ನಾಲ್ಕು ಕಿ.ಮೀ.ದೂರ ಹೋದರೆ ಈ ಕೆರೆಯು ಸಿಗಲಿದ್ದು, ನೀರು ತುಂಬಿದಾಗ ಮಿನಿ ಸಮುದ್ರದಂತೆ ಕಾಣಿಸುತ್ತದೆ. ಸಿದ್ದಾರ್ಥನಗರ, ರಾವಣಿ, ವಡ್ಡರಹಳ್ಳಿ, ನಿಡಘಟ್ಟ, ಗಾಜನೂರು ಸೇರಿದಂತೆ ಹಲವು ಗ್ರಾಮಗಳ ರೈತರು 2500 ಎಕರೆ ಜಮೀನಿನಲ್ಲಿ ಬೆಳೆ ಬೆಳೆಯುತ್ತಾರೆ.ಕೆಲವ ವರ್ಷಗಳ ಹಿಂದೆ ಈ ಕೆರೆ ನೀರಿನಿದ ಎರಡು ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಹೂಳು, ಕೆರೆ ಒತ್ತುವರಿ ಹಾಗೂ ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ ಒಂದು ಬೆಳೆಯನ್ನು ಮಾತ್ರ ಬೆಳೆಯಲು ಸಾಧ್ಯವಾಗುತ್ತಿದೆ.ಹೂಳು ತುಂಬಿದೆ. ಕೆರೆಯಲ್ಲಿ ವಡಕೆ, ಜೊಂಡುಗಳು ಬೆಳೆದಿವೆ. ಈ ಕೆರೆಯ ಹೂಳೆತ್ತಿರುವುದು ನೆನಪಿಲ್ಲ ಎನ್ನುತ್ತಾರೆ ರೈತರು. ಕೆಲವು ವರ್ಷಗಳ ಹಿಂದೆ ಇದೇ  ಕೆರೆಯ ನೀರನ್ನು ಮಳವಳ್ಳಿ ಪಟ್ಟಣಕ್ಕೆ ಕುಡಿಯಲು ಪೂರೈಸ ಮಾಡಲಾ ಗುತ್ತಿತ್ತು. ಆದರೆ ಕಾಲಾಂತರದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳ ಲಾಗಿದೆ. ಕೆರೆಯ ನೀರನ್ನೇ ಅವಲಂಬಿಸಿದ್ದರೆ ಸಮಸ್ಯೆ ಎದುರಿಸಬೇಕಾಗತ್ತಿತ್ತು.ಕೆರೆಯಲ್ಲಿ ಮೀನುಗಳ ಸಾಕಾಣಿಕೆ ಮಾಡಲಾಗತ್ತದೆ. ನೂರಾರು ಕುಟುಂಬಗಳು ಇದನ್ನೇ ನಂಬಿಕೊಂಡಿವೆ. ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಿರುವು ಅವರಲ್ಲಿ ಆತಂಕ ಮೂಡಿಸಿದೆ.ಹೂಳೆತ್ತುವ ಮೊದಲು ಒತ್ತುವರಿಯಾಗಿರುವ ಪ್ರದೇಶವನ್ನು ತೆರವುಗೊಳಿಸಲು ಕೆರೆಯನ್ನು ಸರ್ವೆ ಮಾಡಿಸಲು ಕಂದಾಯ ಇಲಾಖೆಗೆ ಮನವಿ ಮಾಡಲಾಗಿತ್ತು. ಇನ್ನೂ ಸರ್ವೆ ಮಾಡಿಸಿಲ್ಲ. ಕೆರೆ ಒತ್ತುವರಿ ತೆರವುಗೊಳಿಸಿದ್ದರೆ, ಈ ಬಾರಿ ಕೆರೆಯ ಹೂಳೆತ್ತಬಹುದಿತ್ತು ಎನ್ನುತ್ತಾರೆ ನೀರಾವರಿ ನಿಗಮದ ಅಧಿಕಾರಿಗಳು.

ಎನ್.ಪುಟ್ಟಸ್ವಾಮಾರಾಧ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry