ಸೋಮವಾರ, ಡಿಸೆಂಬರ್ 16, 2019
18 °C

ಬರಿ ಬೆಳಗಲ್ಲೋ ಅಣ್ಣಾ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಿ ಬೆಳಗಲ್ಲೋ ಅಣ್ಣಾ...

ಬೆಳಕು ಹುಟ್ಟಿದ ಸಮಯ. ಗರಿಕೆಗೆ ಜೀವ. ಪಾರ್ಕುಗಳಲ್ಲಿನ ಖಾಲಿ ಕುರ್ಚಿಗಳಲ್ಲಿ ಸಂಚಾರಿಭಾವ. ಮಂಜು ಮೆತ್ತಿಕೊಂಡ ಎಲೆಗಳಿಗೆ ಬೆಚ್ಚನೆಯ ಭಾವ. ಅರಳಿದ ಹೂವಿನ ಬಾಲ್ಯದ ನಗು.ಆಕಳಿಕೆಯಿಂದೆದ್ದ ನಾಯಿಯ ಕಣ್ಣುಗಳಿಗೆ ಬೆಳಕ ಎದುರುಗೊಳ್ಳುವ ಹವಣಿಕೆ. ಶುರುವಾದ ಹಕ್ಕಿಗಳ ಕಸುಬುದಾರಿಕೆ. ಲೆಕ್ಕವಿಲ್ಲದಷ್ಟು ಕನಸು ಕಂಡ ಜೀವಗಳೆಲ್ಲಾ ಮರುಹುಟ್ಟು ಪಡೆದಂತೆ ಕಾಣುವ ಬೆಳಗು ನಗರದಲ್ಲೂ ಎಷ್ಟು ಚೆಂದ... ಕಾಣಿರಾ?

ಪ್ರತಿಕ್ರಿಯಿಸಿ (+)