ಗುರುವಾರ , ಏಪ್ರಿಲ್ 15, 2021
22 °C

ಬರ್ತಿದ್ದಾರೆ ಪಡುವಾರಳ್ಳಿ ಪಡ್ಡೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿರುತೆರೆ ಹಾಸ್ಯ ಧಾರಾವಾಹಿಗಳ ಪಾಲಿಗೆ ಹೊಸತೊಂದು ಧಾರಾವಾಹಿ ಸೇರ್ಪಡೆಯಾಗುತ್ತಿದೆ- ‘ಪಡುವಾರಳ್ಳಿ ಪಡ್ಡೆಗಳು’ ಮೂಲಕ. ಸುವರ್ಣ ವಾಹಿನಿಯಲ್ಲಿ ಏಪ್ರಿಲ್ 25ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿರಾತ್ರಿ 10.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.ಈ ಮೊದಲು ‘ಎಸ್.ಎಸ್.ಎಲ್.ಸಿ ನನ್ ಮಕ್ಳು’ ಎನ್ನುವ ಧಾರಾವಾಹಿ ನಿರ್ದೇಶಿಸಿದ್ದ ಆನಂದ್ ಈಗ ಪಡ್ಡೆಗಳ ಕಥೆ ಹೇಳುತ್ತಿದ್ದಾರೆ. ‘ಮಾಸ್ಟರ್ ಆನಂದ್’ ಪ್ರಭಾವಳಿಯಿಂದ ಹೊರಬಂದು, ಈಗ ನಿರ್ದೇಶನದಲ್ಲೂ ಪಳಗಿರುವ ಆನಂದ್ ನಿರ್ದೇಶನದೊಂದಿಗೆ ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

 

ಹಳ್ಳಿಯ ದೈನಂದಿನ ಜೀವನ ಹಾಗೂ ಅಲ್ಲಿ ನಡೆಯುವ ಹಾಸ್ಯ ಸನ್ನಿವೇಶಗಳು ‘ಪಡುವಾರಳ್ಳಿ ಪಡ್ಡೆಗಳು’ ಧಾರಾವಾಹಿಯ ಜೀವಾಳವಾಗಿದ್ದು, ಕೋಲಾರ ಸಮೀಪದ ಹಳ್ಳಿಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.