ಬರ್ಬರ ಕೃತ್ಯ, ಜನತಂತ್ರದ ಅಣಕು

ಬುಧವಾರ, ಜೂಲೈ 17, 2019
29 °C

ಬರ್ಬರ ಕೃತ್ಯ, ಜನತಂತ್ರದ ಅಣಕು

Published:
Updated:

ವಿದೇಶದ ಬ್ಯಾಂಕುಗಳಲ್ಲಿ ಇಟ್ಟಿರುವ ಭಾರತೀಯರ ಕಪ್ಪುಹಣವನ್ನು ವಾಪಾಸ್ ತರಬೇಕೆಂದು ಒತ್ತಾಯಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಗ್ರಹ ನಡೆಸುತ್ತಿದ್ದ ಯೋಗಗುರು ಬಾಬಾ ರಾಮದೇವ್ ಅವರನ್ನು ರಾತ್ರೋರಾತ್ರಿ ಬಂಧಿಸಿರುವುದು ಸರಿಯಲ್ಲ.

 

ಉಪವಾಸ ಸತ್ಯಾಗ್ರಹದಿಂದ ಜನತೆಯ ನೆಮ್ಮದಿ ನಾಶವಾಗಿ ಕಾನೂನು ಭಂಗವಾಗಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳ ಬಹುದಿತ್ತು. ಕೇಂದ್ರ ಸರ್ಕಾರದ ಈ ಕ್ರಮ ಬರ್ಬರ ಕೃತ್ಯ ಮತ್ತು ಜನತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕುಕೃತ್ಯ.

 

ಜನತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಶಾಂತಿಯುತ ಸತ್ಯಾಗ್ರಹ ಮಾಡುವ ಹಕ್ಕು ಎಲ್ಲರಿಗೂ ಇದೆ. ಚರ್ಚೆ ಸಂಧಾನದ ಮೂಲಕ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ.

 

ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ವಿರೋಧ ಪಕ್ಷಗಳಿಗೆ ಬಾಬಾ ಅವರನ್ನು ಬಂಧಿಸಿ, ಬಿಡುಗಡೆ ಮಾಡಿರುವುದು ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಬಾಬಾ ಅವರಿಗೆ  ಭಾರತದ ಉತ್ತಮ ಭವಿಷ್ಯಕ್ಕಾಗಿ ನ್ಯಾಯೋಚಿತ ಹೋರಾಟ ಮುಂದುವರಿಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry