ಸೋಮವಾರ, ಆಗಸ್ಟ್ 19, 2019
28 °C

ಬರ್ಮಿಂಗ್‌ಹ್ಯಾಮ್‌ಗೆ ಡ್ರೀಮ್‌ಲೈನರ್ ಸೇವೆ

Published:
Updated:

ಲಂಡನ್(ಪಿಟಿಐ): ಬರ್ಮಿಂಗ್‌ಹ್ಯಾಮ್‌ನ ವಿಮಾನ ನಿಲ್ದಾಣದಲ್ಲಿ ಏರ್‌ಇಂಡಿಯಾದ ಡ್ರೀಮ್‌ಲೈನರ್ ವಿಮಾನ ಇಳಿಯುವ ಮೂಲಕ ಪಂಜಾಬ್ ಜನರ ಬಹುದಿನದ ಕನಸು ನನಸಾಗಿದೆ.ಅಮೃತಸರ ಮತ್ತು ದೆಹಲಿಯಿಂದ ಬರ್ಮಿಂಗ್‌ಹ್ಯಾಮ್‌ಗೆ ವಿಮಾನ ಸಂಪರ್ಕ ಪಂಜಾಬ್ ಜನರ ಬಹುದಿನದ ಕನಸಾಗಿತ್ತು. 220 ಪ್ರಯಾಣಿಕರನ್ನು ಒಳಗೊಂಡ ಏರ್‌ಇಂಡಿಯಾದ `ಡ್ರೀಮ್‌ಲೈನರ್ ಎಎಲ್ 461' ವಿಮಾನಕ್ಕೆ  ಗುರುವಾರ ರಾತ್ರಿ ಬರ್ಮಿಂಗ್‌ಹ್ಯಾಮ್ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ದೊರೆಯಿತು.

Post Comments (+)