ಮಂಗಳವಾರ, ಏಪ್ರಿಲ್ 13, 2021
25 °C

ಬರ: ದಾವಣಗೆರೆ ಜಿಲ್ಲೆಗೆ ಮತ್ತೆ ರೂ 3 ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬರ ನಿರ್ವಹಣೆಗಾಗಿ ಜಿಲ್ಲೆಗೆ ಮತ್ತೆ ರೂ  3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ರೂ 50 ಲಕ್ಷ ಮೀಸಲು ನಿಧಿಗೆ ನೀಡಿ, ಉಳಿದ ರೂ 2.5 ಕೋಟಿಯನ್ನು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಬರ ಪರಿಹಾರ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಎಲ್ಲ ತಾಲ್ಲೂಕುಗಳಿಗೂ ಸಮಾನವಾಗಿ ಹಂಚಲಾಯಿತು.ಮುಂಗಾರು ಆಗಮನ ಹಿನ್ನಡೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ಗೋಶಾಲೆ ಆರಂಭಿಸಬೇಕು ಹಾಗೂ ಮೇವು ಬೆಳೆ ಬೆಳೆಯಲು ಹೆಚ್ಚು ಆದ್ಯತೆ ನೀಡಬೇಕು ಎಂದು ಸಚಿವ ಎಸ್.ಎ. ರವೀಂದ್ರನಾಥ್ ಸೂಚಿಸಿದರು.

ಜಿಲ್ಲೆಗೆ ಕುಡಿಯುವ ನೀರು ಪೂರೈಕೆ ಮತ್ತು ಜಾನುವಾರು ಸಂರಕ್ಷಣೆಗೆ ರೂ 3 ಕೋಟಿ ಬಿಡುಗಡೆಯಾಗಿದೆ.ಆದರೆ, ಈ ಮೊತ್ತ ಸಾಲದು. ನೀರು ಪೂರೈಕೆಗೆ  ರೂ 60.6 ಕೋಟಿ, ಮೇವು ಹಾಗೂ ಗೋಶಾಲೆ ತೆರೆಯಲು 6.2 ಕೋಟಿ ಬೇಕಿದೆ. ಹೆಚ್ಚುವರಿ ಕಾಮಗಾರಿಗಳಿಗೆ ಅನುಮೋದನೆ ನೀಡಿ ರೂ  14 ಲಕ್ಷ ಕೊರತೆಯಾಗಿದೆ. ಈ ಎ್ಲ್ಲಲ ಕಾಮಗಾರಿಗಳಿಗೆ ರೂ  68.3 ಕೋಟಿ ಬೇಕಿದ್ದು, ಇನ್ನು ರೂ 38.3 ಕೋಟಿ ಅನುದಾನ ಕೊರತೆ ಇದೆ ಎಂದರು.ಮಳೆ ಬಾರದಿದ್ದರೆ ಗೋಶಾಲೆ ನಿರ್ಮಾಣಕ್ಕೆ ರೂ 62 ಲಕ್ಷ ಬಿಡುಗಡೆ ಮಾಡುವುದು ಮತ್ತು 14 ಎಕರೆಯಲ್ಲಿ ಮೇವು ಬೆಳೆಯಲು ಅನುವು ಮಾಡಲು ನಿರ್ಧರಿಸಲಾಯಿತು.2012ನೇ ಸಾಲಿನಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಕುಡಿಯುವ ನೀರು ಪೂರೈಕೆಯ 170 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಆ ಕಾಮಗಾರಿಗಳಿಗೆ ರೂ  39.1 ಕೋಟಿ ಎಂದು ಅಂದಾಜಿಸಲಾಗಿತ್ತು. ಇಲ್ಲಿವರೆಗೆ ಬಿಡುಗಡೆ ಮಾಡಿದ ಅನುದಾನ 36.5 ಕೋಟಿಯಾಗಿದೆ. ಇನ್ನು 2.4 ಕೋಟಿ ಬಾಕಿ ಇದೆ. ಇಲ್ಲಿಯವರೆಗೆ 152 ಕಾಮಗಾರಿಗಳು ಪೂರ್ಣ ಗೊಂಡಿದ್ದು, 18 ಪ್ರಗತಿಯಲ್ಲಿವೆ ಎಂದರು.2012-13ನೇ ಸಾಲಿನಲ್ಲಿ ರೂ 1.69 ಕೋಟಿ ಮೊತ್ತದಲ್ಲಿ 67 ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಇಲ್ಲಿಯವರೆಗೆ ರೂ  1.27 ಬಿಡುಗಡೆಯಾಗಿದೆ. 27 ಕಾಮಗಾರಿಗಳು ಪೂರ್ಣಗೊಂಡಿದ್ದು, 40 ಪ್ರಗತಿಯಲ್ಲಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯ್‌ಕುಮಾರ್ ತಿಳಿಸಿದರು.ತುರ್ತಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ದಾವಣಗೆರೆ ಉತ್ತರದಲ್ಲಿ 9, ದಕ್ಷಿಣದಲ್ಲಿ 17, ದಾವಣಗೆರೆ ತಾಲ್ಲೂಕು ಮಾಯಕೊಂಡ 41, ಚನ್ನಗಿರಿ 16, ಹರಿಹರ 68, ಹೊನ್ನಾಳಿ 41 ಮತ್ತು ಚನ್ನಗಿರಿಯಲ್ಲಿ 45 ಕಡೆಗಳಲ್ಲಿ ತುರ್ತಾಗಿ ಕಾಮಗಾರಿ ಕೈಗೊಳ್ಳಬೇಕಾಗಿದೆ ಎಂದರು.364 ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ತುರ್ತಾಗಿ ಹಣ ಬಿಡುಗಡೆ ಮಾಡಬೇಕಿದೆ. ಸಿಆರ್‌ಎಫ್‌ನಿಧಿ ರೂ   60.6 ಕೋಟಿ ಜಿಲ್ಲಾ ಪಂಚಾಯ್ತಿ ನಿಧಿಯಲ್ಲಿ ರೂ 31.2 ಕೋಟಿ ಒಟ್ಟು 91.8 ಕೋಟಿ ಅನುದಾನ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮೆಳ್ಳೆಕಟ್ಟೆ ಚಿದಾನಂದ ಐಗೂರು, ಸಿಇಒ ಎ.ಬಿ. ಹೇಮಚಂದ್ರ, ಡಾ.ಆರ್.ಜಿ. ಗೊಲ್ಲರ್, ಮಹೇಶ್‌ಗೌಡ ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.