ಗುರುವಾರ , ಮೇ 13, 2021
17 °C

ಬರ ನಿರ್ವಹಣೆಗೆ ಆದ್ಯತೆ: ಅಧಿಕಾರಿಗಳಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಬರಗಾಲ ಪರಿಸ್ಥಿತಿ ನಿಭಾಯಿಸುವುದು `ನಿಸರ್ಗದ ವಿರುದ್ಧದ ಹೋರಾಟ~ ಎಂದೇ ಆಡಳಿತ ಯಂತ್ರ ಪರಿಭಾವಿಸಬೇಕು. 24 ತಾಸೂ ವಾರದ ಏಳೂ ದಿನ ಕೆಲಸ ಮಾಡಬೇಕು ಎಂದು ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಕೈಗೊಂಡ ಕಾರ್ಯಗಳ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ವಾರದಲ್ಲಿ ಮೂರು ದಿನ ಕ್ಷೇತ್ರ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿಗಳನ್ನೇ ಅವಲಂಬಿಸಿ ಕ್ಷೇತ್ರ ಭೇಟಿಯಿಂದ ದೂರ ಉಳಿಯಬಾರದು. ಪ್ರತಿ ಹಳ್ಳಿಗೂ ನೀರಿನ ಸಮರ್ಪಕ ವಿತರಣೆಗೆ ಕ್ರಮ ಜರುಗಿಸಬೇಕು. ತೀರಾ ಅಗತ್ಯವಿದ್ದರೆ ಎರಡರಿಂದ ಮೂರು ಹೋಬಳಿಗೊಂದು ಗೋಶಾಲೆ ತೆರೆಯಬಹುದು, ಕೊಳವೆ ಬಾವಿ ದುರಸ್ತಿ ಕಾರ್ಯಕ್ಕಾಗಿಯೇ ಒಂದು ವಾಹನದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.ಶಾಸಕರಾದ ಹಂಪಯ್ಯ ನಾಯಕ, ಮಾನಪ್ಪ ವಜ್ಜಲ್, ಸಯ್ಯದ್ ಯಾಸಿನ್, ರಾಯಪ್ಪ ನಾಯಕ, ಶಿವನಗೌಡ ನಾಯಕ, ಪ್ರತಾಪಗೌಡ ಪಾಟೀಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜಕುಮಾರ ಜೈನ್ ವೇದಿಕೆಯಲ್ಲಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.