ಭಾನುವಾರ, ಏಪ್ರಿಲ್ 11, 2021
22 °C

ಬರ ನೆರವು ಬಳಕೆ ಯೋಜನೆ ರೂಪಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್:  ಜಿಲ್ಲೆಯಲ್ಲಿ ಕಳೆದ ವರ್ಷ ತಲೆದೋರಿದ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ತಾಲ್ಲೂಕಿಗೆ ತಲಾ 1 ಕೋಟಿ ರೂಪಾಯಿ ನೆರವು ಬಿಡುಗಡೆ ಮಾಡಿದ್ದರೂ ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕ್ರಮಕಗೊಂಡಿಲ್ಲ ಎಂದು ಶಾಸಕ ಈಶ್ವರ ಖಂಡ್ರೆ ಆರೋಪಿಸಿದರು.ಕಳೆದ ಜುಲೈ ತಿಂಗಳಲ್ಲೇ ಹಣ ಬಿಡುಗಡೆಯಾಗಿದೆ. ಈ ಬಗೆಗೆ ಉಸ್ತುವಾರಿ ಸಚಿವರು, ಪ್ರಭಾರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆಗೂ ಚರ್ಚೆ ನಡೆಸಲಾಗಿದೆ. ಆದರೂ, ಕುಡಿಯುವ ನೀರು ಸಮಸ್ಯೆ ನಿರ್ವಹಣೆ ಸೇರಿದಂತೆ ಪೂರಕ ಸಮಸ್ಯೆಗಳ ಪರಿಹಾರ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಶಃ ಯೋಜನೆ ರೂಪಿಸದೇ ಹಣ ಬಳಸಲು ಸಾಧ್ಯವಾಗದೆ ವಾಪಸು ಕಳುಹಿಸುವ ಸಂಚುಇದರ ಹಿಂದೆ ಇದ್ದಿರಬಹುದು. ಅಂಥ ಯತ್ನಗಳು ನಡೆದರೆ, ಶೀಘ್ರ ಈ ನೆರವು ಬಳಸಲು ಒತ್ತು ನೀಡದೇ ಇದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.ಈ ವರ್ಷವೂ ಕೂಡಾ ಮಳೆಯಾಗಿ ಬಿತ್ತನೆ ಚಟುವಟಿಕೆ ಚೆನ್ನಾಗಿದ್ದರೂ ಇನ್ನೊಂದು ಸುತ್ತಿನ ಮಳೆ ಬರದಿದ್ದರೆ ಉದ್ದು, ಸೋಯಾಬಿನ್ ಬೆಳೆಗಳು ಕೈಗೆ ಸಿಗುವುದಿಲ್ಲ. ಪರಿಸ್ಥಿತಿಯು ಇನ್ನಷ್ಟು ಕಷ್ಟವಾಗಬಹುದು ಎಂದು ಅಭಿಪ್ರಾಯಟ್ಟರು.ಬಿತ್ತನೆಗೆ ಪೂರವಾಗಿ ಮಳೆಯಾಗಿದ್ದರೂ ಒಟ್ಟು ಮಳೆ ಜುಲೈ, ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತಲೂ ಕಡಿಮೆಯೇಇದೆ.  ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕುಡಿಯುವ ನೀರು ಪೂರೈಕೆ, ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಒದಗಿಸುವುದು ಸೇರಿದಂತೆ ಅಗತ್ಯಪರಿಹಾರ ಕೈಗೊಳ್ಳಲು ಒತ್ತು ನೀಡಬೇಕು ಎಂದು ಆಗ್ರಹಪಡಿಸಿದರು.ಜುಲೈ ತಿಂಗಳಲೇ ಬಿಡುಗಡೆಯಾಗಿರುವ ನೆರವಿನ ಮೊತ್ತ ಬಳಸಲು ಕಾರ್ಯಯೋಜನೆ ರೂಪಿಸಬೆಕು. ಮಳೆಯಾಗಿದ್ದರೂ ಭಾಲ್ಕಿ ಸೇರಿದಂತೆ ಗಡಿ ಭಾಗದ ಗ್ರಾಮಗಳಲ್ಲಿ ಇಂದಿಗೂ ಸಮಸ್ಯೆ ಇರುವುದನ್ನು ಅಧಿಕಾರಿಗಳು ಗಮನಿಸಬೇಕು ಎಂದು ಹೇಳಿದರು.ಉದ್ಯೋಗ ಖಾತರಿ ಯೋಜನೆ: ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಗುಣಮಟ್ಟ ಚೆನ್ನಾಗಿರುವ ಕಡೆಗಳಲ್ಲಿ ಕಾರ್ಮಿಕರಿಗೆ ಬಾಕಿ ಇರುವ ಕೂಲಿ ಪಾವತಿಸಲು ಇರುವ ತೊಡಕುಗಳನ್ನು ಇದೇ 24ರವರೆಗೂ ಅನ್ವಯಿಸುವಂತೆ ತೊಡೆದುಹಾಕಿದ್ದು, ಅಧಿಕಾರಿಗಳು ಆದಷ್ಟು ಶೀಘ್ರ ವಿವರ ಹಾಜರುಪಡಿಸಿ ಮೊತ್ತ ಪಡಯಬೇಕು ಎಂದು ಒತ್ತಾಯಿಸಿದರು.ಅಕ್ರಮ ನಡೆದಿರುವ ಕಡೆದ ತನಿಖೆ ನಡೆಯಬೇಕು ಎಂದು ತಾವು ಒತ್ತಾಯ ಮಾಡಿದ್ದುದು ನಿಜ. ಹಾಗೆಂದು, ಕಾಮಗಾರಿ ನಡೆದಿರುವ ಕಡೆ ನಿಜವಾದ ಕೂಲಿಕಾರರಿಗೆ ತೊಂದರೆ ಆಗಬಾರದು. ಭಾಲ್ಕಿ ತಾಲ್ಲೂಕಿನಲ್ಲಿಯೇ 09-10ಮತ್ತು 10-11ನೇ ಸಾಲಿನಲ್ಲಿ ಸುಮಾರು 10 ಕೋಟಿ ರೂಪಾಯಿ ಪಾವತಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.