ಶನಿವಾರ, ಮೇ 8, 2021
25 °C

ಬರ ಪರಿಹಾರ; ಕ್ರಮ ಕೈಗೊಳ್ಳಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲ ನಿರ್ಮೂಲನೆಗೆ ಸಮರೋ ಪಾದಿ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಯಿತು.ರಾಜ್ಯದ 123 ತಾಲ್ಲೂಕುಗಳಲ್ಲಿ ಉದ್ಭವಿಸಿರುವ ಬರಗಾಲದಿಂದ ಆ ಪ್ರದೇಶದ ರೈತರು ಕಾರ್ಮಿಕರು, ನಾಗರಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಕೂಳಿಗಾಗಿ ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬರ ಪರಿಹಾರ ಕಾಮಗಾರಿಗೆ ಮಂಜೂರಾದ ಹಣದ ಬಳಕೆಯಲ್ಲಿಯೂ ಭ್ರಷ್ಟಾಚಾರ ಕಾಣಿಸಿಕೊಂಡಿದೆ. ಆದ್ದರಿಂದ ಬರ ಪರಿಹಾರಕ್ಕೆ ತ್ವರಿತ ಮಾರ್ಗ ರೂಪಿಸಬೇಕು ಎಂದು ಒತ್ತಾಯಿಸಿದರು.ಸಲಹೆ: ಕಾಯಂ ಬರಗಾಲ ನಿರ್ಮೂಲನೆ ಮಾಡಲು ಖುಷ್ಕಿ ಪ್ರದೇಶದ ಕೃಷಿ ನೀತಿಯನ್ನು ಜಾರಿಗೆ ತರಬೇಕು. ಬರಗಾಲಪೀಡಿತ ಪ್ರದೇಶದ ರೈತರ ಸಾಲವನ್ನು ಮನ್ನಾ ಮಾಡಬೇಕು. ಹೆಚ್ಚಿನ ಸಾಲ ನೀಡಬೇಕು. ಉದ್ಯೋಗ ಸೃಷ್ಟಿ ಮಾಡಬೇಕು. ಜನ- ಜಾನುವಾರುಗಳ ರಕ್ಷಣೆಗೆ ನೀರು, ಮೇವನ್ನು ಸಮರೋಪಾದಿಯಲ್ಲಿ ಪೂರೈಸಬೇಕು. ಬರಗಾಲ ಪರಿಹಾರ ನಿಧಿ ಸಮಿತಿ ರಚಿಸಬೇಕು. ರಾಜ್ಯದ ಜನಪ್ರತಿನಿಧಿಗಳು ತಮ್ಮ ಒಂದು ತಿಂಗಳ ಗೌರವಧನವನ್ನು ಈ ನಿಧಿಗೆ ನೀಡಬೇಕು. ಕನಿಷ್ಠ 8 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಪೂರೈಸಬೇಕು. ಅಂತರ್‌ಜಲ ರಕ್ಷಣೆ ಮತ್ತು ಅಭಿವೃದ್ಧಿಯನ್ನು ಪ್ರಮುಖ ಕಾರ್ಯಕ್ರಮ ಎಂದು ಘೋಷಿಸುವುದು ಸೇರಿದಂತೆ 14 ಅಂಶಗಳ ಸಲಹೆ ನೀಡಿದರು.ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ರೈತ ಮುಖಂಡರಾದ ತೇಜಸ್ವಿ ವಿ. ಪಟೇಲ್, ವಾಸನದ ಓಂಕಾರಪ್ಪ, ಮರಡಿ ನಾಗಪ್ಪ, ನಿಟುವಳ್ಳಿ ಆಂಜಿನಪ್ಪ, ಕೆಂಗಲಹಳ್ಳಿ ವರದರಾಜ್, ಗುತ್ತೂರು ಬಸಣ್ಣ, ಎಸ್.ಎಚ್. ಮಂಜುನಾಥ್ ಇತರರು ನೇತೃತ್ವ ವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.