ಬರ: ರೈತರ ಮಕ್ಕಳಿಗೆ ಶಿಕ್ಷಣ ಶುಲ್ಕ ಇಲ್ಲ

7

ಬರ: ರೈತರ ಮಕ್ಕಳಿಗೆ ಶಿಕ್ಷಣ ಶುಲ್ಕ ಇಲ್ಲ

Published:
Updated:

ಹುಬ್ಬಳ್ಳಿ: ಬರಪೀಡಿತ ಪ್ರದೇಶಗಳ ರೈತರ ಮಕ್ಕಳ ಶೈಕ್ಷಣಿಕ ಶುಲ್ಕವನ್ನು ಇನ್ನು ಮುಂದೆ ಸರ್ಕಾರವೇ ಭರಿಸಲಿದೆ. ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್ ಗಳು ಹಾಗೂ ಸಾಮಾನ್ಯ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಇದು ಅನ್ವಯ ವಾಗಲಿದೆ.ಧಾರವಾಡದ ಕೃಷಿ ವಿಶ್ವವಿದ್ಯಾ ಲಯದಲ್ಲಿ ಭಾನುವಾರ ಕೃಷಿ ಮೇಳ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಈ ತೀರ್ಮಾನ ಪ್ರಕಟಿಸಿದರು.‘ನಾನೂ ರೈತರ ಮಗನೇ, ಇಲ್ಲಿಗೆ ಬಂದ ಮೇಲೆ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ. ಎಷ್ಟು ಸಹಾಯ ಮಾಡಲು ಸಾಧ್ಯವೋ ಅಷ್ಟೂ ಮಾಡ ಲಿದ್ದೇನೆ’ ಎಂದು ಅವರು ರೈತರಿಗೆ ಧೈರ್ಯ ತುಂಬಿದರು.ಹನಿ ನೀರಾವರಿ  ಸಬ್ಸಿಡಿ: ಕೃಷಿಯಲ್ಲಿ ಕಡಿಮೆ ನೀರು ಬಳಕೆಯನ್ನು ಉತ್ತೇ ಜಿಸಲು ಹನಿ ನೀರಾವರಿ ಸೌಲಭ್ಯ ಅಳವಡಿಸಿಕೊಳ್ಳುವ ಎಲ್ಲ ರೈತರಿಗೂ ಶೇ 90ರಷ್ಟು ಸಬ್ಸಿಡಿ ನೀಡಲಾಗು ವುದು ಎಂದು ಪ್ರಕಟಿಸಿದರು.ಇದುವರೆಗೆ ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿದ್ದವರಿಗೆ ಮಾತ್ರ ಈ ಸೌಲಭ್ಯ ನೀಡಲಾ ಗುತ್ತಿತ್ತು. ಇನ್ನು ಮುಂದೆ ಸಣ್ಣ ಮತ್ತು ದೊಡ್ಡ ಹಿಡುವಳಿದಾರರು ಎಂಬ ಭೇದವಿಲ್ಲದೆ ಎಲ್ಲ ರೈತರಿಗೂ ಈ ಯೋಜನೆಯನ್ನು ವಿಸ್ತರಿಸಲಾಗು ವುದು ಎಂದರು.ರಾಜ್ಯದ ಒಣಭೂಮಿ ಪ್ರದೇಶ ಗಳಲ್ಲಿ ಪದೇ ಪದೇ ಬರಗಾಲ ಬರುತ್ತಿದೆ. ಈ ವರ್ಷವೂ ಅದು ಪುನರಾವರ್ತನೆಯಾಗಿದೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ತಜ್ಞರು ಮುಂದಾಗಬೇಕು. ‘ನೀವು ನೀಡುವ ವರದಿ ಆಧರಿಸಿ ಒಣಭೂಮಿ ಬೇಸಾಯದ ಕುರಿತು ಸ್ಪಷ್ಟ ನೀತಿ ರೂಪಿಸಲು ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಹೇಳಿದರು.ಕೃಷಿ ಬೆಲೆ ಆಯೋಗ: ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ದೊರ ಕಿಸಿಕೊಡಲು ಕೃಷಿ ಬೆಲೆ ಆಯೋಗ ರಚಿಸಲಾಗುತ್ತಿದೆ. ಅದರಲ್ಲಿ ಕೃಷಿಕರು, ಕೃಷಿ ತಜ್ಞರು, ಮಾರುಕಟ್ಟೆ ಪರಿಣತರು ಹಾಗೂ ಕೃಷಿ ಅಧಿಕಾರಿಗಳು ಇರಲಿ ದ್ದಾರೆ. ಆಯೋಗದ ಶಿಫಾರಸಿನ ಅನ್ವಯ ಪ್ರತಿ ವರ್ಷ ಸರ್ಕಾರ ರೈತರ ಬೆಳೆಗಳಿಗೆ ಬೆಲೆ ನಿಗದಿಪಡಿಸಲಿದೆ ಎಂದರು.ಕೃಷಿ ಇಲಾಖೆಗೆ ತರಾಟೆ: ಕೃಷಿ ಇಲಾಖೆಯಲ್ಲಿ ಇತ್ತೀಚೆಗೆ ವಿಸ್ತರಣಾ ಚಟುವಟಿಕೆಗಳು ಕಡಿಮೆಯಾಗಿವೆ. ಹಿಂದೆ ಗ್ರಾಮ ಸೇವಕರು ಹಳ್ಳಿಗಳಲ್ಲಿ ವಾಸಿಸುತ್ತಿದ್ದ ವೇಳೆ ತಳಮಟ್ಟದಲ್ಲಿ ಇಲಾಖೆ ರೈತರೊಂದಿಗೆ ಸಂಪರ್ಕ ಹೊಂದಿತ್ತು.ಈಗ ಆ ಕೆಲಸ ನಡೆಯುತ್ತಿಲ್ಲ. ಕೇವಲ ರೈತರಿಗೆ ಸಬ್ಸಿಡಿ ಯಲ್ಲಿ ಬೀಜ–ಗೊಬ್ಬರ ವಿತರಿಸುವು ದನ್ನೇ ಕೆಲಸ ಅಂದುಕೊಂಡಂತಿದೆ. ಕೃಷಿ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ರೈತರ ಬಳಿಗೆ ಕೊಂಡೊಯ್ಯಲು ವಿಸ್ತರಣಾ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳಲು ಗಂಭೀರವಾಗಿ ಚಿಂತನೆ ನಡೆಸುವಂತೆ ಕೃಷಿ ಇಲಾಖೆಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry