ಭಾನುವಾರ, ಜೂನ್ 20, 2021
25 °C

ಬರ, ರೋಗ, ಹಸಿವು... ಜಾಗತಿಕ ತಾಪಮಾನದ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ಬಂಡವಾಳಶಾಹಿ ದೇಶದ ಶ್ರೀಮಂತರ ಐಶಾರಾಮಿ ಜೀವನ ಶೈಲಿ ಹಾಗೂ ಸಾಮ್ರಾಜ್ಯಶಾಹಿ ಧೋರಣೆಗಳ ಫಲವಾಗಿ ಇಂದು ಬಡದೇಶಗಳು ಜಾಗತಿಕ ತಾಪಮಾ ನದ ಭೀಕರ ಪರಿಣಾಮವನ್ನು ಎದುರಿಸುವಂತಾಗಿದೆ. ಈ ಕಾರಣವಾಗಿ ಬರ, ರೋಗ, ಹಸಿವು, ಮಾಲಿನ್ಯ ಇಂತಹ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ~ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಖಜಾಂಚಿ ಹಾಗೂ ಸಾಫ್ಟೆಕ್ ಕಂಪ್ಯೂಟರ್ ಅಕಾಡೆಮಿ ವ್ಯವಸ್ಥಾ ಪಕ ನಿರ್ದೇಶಕ ಬಿ.ಜಿ.ಗೋಪಾಲಕೃಷ್ಣ ನುಡಿದರು.ಹಾಸನ ನಗರ ಸಭೆ ಹಾಗೂ ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನೆರವಿನೊಂದಿಗೆ ನಗರದ ರಾಜೀವ್ ಬಿಎಡ್ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೂನ್‌ನಲ್ಲಿ ಹಾಸನದಲ್ಲಿ ನಡೆಸಲು ಉದ್ದೇಶಿಸಿರುವ ರಾಜ್ಯ ಮಟ್ಟದ ಹವಾಮಾನ ವಿಜ್ಞಾನ ಹಾಗೂ ಪರಿಸರ ಶಿಕ್ಷಣ ಕಾರ್ಯಾಗಾರದ ಪೂರ್ವಭಾವಿ ಯಾಗಿ ಬಿಜಿವಿಎಸ್ ಆರ್ಶರಯದಲ್ಲಿ ಸರಣಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.ಕಳೆದ 4.2ಲಕ್ಷ ವರ್ಷದಲ್ಲಿ  ಇಂಗಾಲಾಮ್ಲ 180 ರಿಂದ 280 ಪಿ.ಪಿ.ಎಂ ಬದಲಾಗಿದೆ ಆದರೆ 2100ರ ವೇಳೆಗೆ ಇದು 700 ರಿಂದ 900 ಪಿಪಿಎಂಗೆ ಏರಲಿದೆ. ಆಗ ಯಾವ ಜೀವಿಯೂ ಭೂಮಿಮೇಲೆ ಬದುಕಲಾರದು. ಯಾವ ಸಾಮ್ರಾಜ್ಯಶಾಹಿ ದೇಶವೂ ಹೆಚ್ಚು ದಿನ ನಾಟಕವಾಡಲು ಸಾಧ್ಯವಿಲ್ಲ ಜಾಗತಿಕ ತಾಪಮಾನ ಕಡಿತಗೊಳಿಸುವ ರಾಜತಾಂತ್ರಿಕ ಪರಿಹಾರ ಹಾಗೂ ವೈಜ್ಞಾನಿಕ ವಿಧಾನಗಳನ್ನು ತುರ್ತಾಗಿ ಅನುಸ ರಿಸಲೇಬೇಕಾಗಿದೆ. ಭಾರತವೂ ಸೇರಿದಂತೆ ಬಹುತೇಕ ರಾಷ್ಟ್ರಗಳು ಈ ಕುರಿತು ಕಾರ್ಯಪ್ರವೃತ್ತವಾಗಿವೆ.ಆದರೆ ಅಮೆರಿಕ ಮಾತ್ರ ತಕರಾರು ಮಾಡುತ್ತಿದೆ. ಕ್ವೀಟೋ ಒಡಂಬಡಿಕೆಗೆ ಅಮೆರಿಕ ಸಹಿ ಹಾಕಿದರೆ ಮಾತ್ರ ಸಮಸ್ಯೆ ಬಗೆ ಹರಿಯಲು ಸಾಧ್ಯ. ಇಲ್ಲದಿದ್ದರೆ ಅಮೆರಿಕ ಸಮೇತ ಇಡೀ ಪ್ರಪಂಚವೇ ಅವಘಡಕ್ಕೆ ಒಳಗಾಗಲಿದೆ~ ಎಂದು ಎಚ್ಚರಿಸಿದರು. ವಿದ್ಯಾರ್ಥಿ ಮುಖಂಡ ಎಂ.ಜಿ.ಪೃಥ್ವಿ ಹಾಗೂ ಕಾಲೇ ಜಿನ ಪ್ರಾಂಶುಪಾಲ ಸುಧೀರ್ ಇದ್ದರು.  ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಾಯಿತು. ಕೊನೆಯಲ್ಲಿ ಹವಾಮಾನ ವೈಪರೀತ್ಯ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.