ಶನಿವಾರ, ಮೇ 8, 2021
26 °C

ಬರ: 500 ಕೋಟಿ ಕೊಡಿ: ಕೇಂದ್ರಕ್ಕೆ ಬಿಎಸ್‌ವೈ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು:  ರಾಜ್ಯದಲ್ಲಿನ ಬರ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರವು ಸರ್ವ ಸಿದ್ಧತೆ ಮಾಡಿಕೊಂಡು ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರವು ಇದಕ್ಕಾಗಿ ಕೂಡಲೇ 500 ಕೋಟಿ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ತೀವ್ರ ಬರ ಪರಿಸ್ಥಿತಿ ಇದೆ. ವಿರೋಧ ಪಕ್ಷದ ನಾಯಕರು, ಮುಖಂಡರು ಬರ ಸ್ಥಿತಿಯುಳ್ಳ ಜಿಲ್ಲೆಗಳಿಗೆ ಭೇಟಿ ನೀಡಬೇಕಿತ್ತು. ಆ ಕೆಲಸ ಮಾಡಿಲ್ಲ. ಈಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ರಾಜ್ಯದ ಕಾಂಗ್ರೆಸ್ ಮುಖಂಡರಿಗೆ ಕೂಡಲೇ ಬರ ಪ್ರದೇಶಕ್ಕೆ ಭೇಟಿ ಜನತೆ ಸಮಸ್ಯೆಗೆ ಸ್ಪಂದಿಸಿ ಎಂದು ಹೇಳಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.ಸುಮಾರು 123 ತಾಲ್ಲೂಕಿನ ಜನತೆ ಬರಗಾಲದಿಂದ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ, ಬರ ಪೀಡಿತ ಪ್ರದೇಶಗಳಿಗೆ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಶಾಸಕರು, ಸಚಿವರು ಭೇಟಿ ನೀಡಬೇಕು ಎಂದು ಹೇಳಿದರು.ಕಳೆದ 40-50 ವರ್ಷಗಳಲ್ಲಿ ಕೃಷ್ಣಾ ನದಿ ಬತ್ತಿರಲಿಲ್ಲ. ಈಗ ನದಿಯಲ್ಲಿ ನೀರಿಲ್ಲದೇ ಜನತೆ ತೊಂದರೆ ಪಡುವಂತಾಗಿದೆ. ಕೊಯ್ನಾ ಜಲಾಶಯದಿಂದ ಶೀಘ್ರ 5ರಿಂದ 6 ಟಿಎಂಸಿ ನೀರು ಹರಿಸಬೇಕು. ಕಾಂಗ್ರೆಸ್ ಪಕ್ಷದ ಮುಖಂಡರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.ರಾಯಚೂರು ತಾಲ್ಲೂಕಿನ ಯರಗೇರಾ ಗ್ರಾಮದಲ್ಲಿ ಮೇವು ಸಂಗ್ರಹಣೆ ಸ್ಥಳಕ್ಕೆ, ಉಡಮಗಲ್ ಖಾನಾಪುರ, ನೆಲಹಾಳಕ್ಕೆ ಅವರು ಭೇಟಿ ನೀಡಿದರು.2.200 ಕೋಟಿಗೆ ಕೋರಿಕೆ `ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ನೀಗಿಸಲು ರೂ.2,200 ಕೋಟಿ ಹಣ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದು ಮುಖ್ಯಮಂತ್ರಿ ಸದಾನಂದ ಗೌಡ ಅವರು ಮೈಸೂರಿನಲ್ಲಿ ಪತ್ರಕರ್ತರಿಗೆ ತಿಳಿಸಿದರು. ಈಗಾಗಲೇ ಕೇಂದ್ರ ರೂ.169 ಕೋಟಿ ಮತ್ತು ರಾಜ್ಯ ಸರ್ಕಾರ ರೂ.364 ಕೋಟಿ ಹಣವನ್ನು ಬರ ನೀಗಿಸಲು ಬಿಡುಗಡೆ ಮಾಡಿವೆ.

 

ಈ ತಿಂಗಳ ಮೂರನೇ ವಾರದಲ್ಲಿ ಸರ್ವಪಕ್ಷಗಳ ಸಭೆ ನಡೆಸಿ ಬಳಿಕ ನವದೆಹಲಿಗೆ ನಿಯೋಗವನ್ನು ಕರೆದೊಯ್ಯಲಾಗುವುದು. ಬರ ಕುರಿತಂತೆ ಯಡಿಯೂರಪ್ಪ ಸಲಹೆಯನ್ನು ಪರಿಗಣಿಸಲಾಗುವುದು~ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.