ಬಲವಂತದ ಬಂದ್ ಆರೋಪ

7

ಬಲವಂತದ ಬಂದ್ ಆರೋಪ

Published:
Updated:

ಶಿಕಾರಿಪುರ: ಶಿಕಾರಿಪುರದಲ್ಲಿ ಬಲವಂತ ಬಂದ್ ನಡೆಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನ ಹಿನ್ನೆಲೆಯಲ್ಲಿ ಜನರು ~ದಿನ ನಿಗದಿ ಮಾಡಿಕೊಂಡು ದುಃಖ ವ್ಯಕ್ತಪಡಿಸುವುದಿಲ್ಲ.~ ತಾಲ್ಲೂಕಿನ ಜನರು ನಿಜವಾಗಿ ಭ್ರಷ್ಟಾಚಾರದ ಪರವಾಗಿ ಇಲ್ಲ. ಸೋಮವಾರ ಬಂದ್ ಆಚರಿಸುವಂತೆ ಅಧಿಕಾರಿಗಳು, ಪೊಲೀಸರ ಮೂಲಕ ಜನರಿಗೆ ತಿಳಿಸಿ ಒತ್ತಾಯಪೂರ್ವಕ ಬಂದ್ ಆಚರಣೆ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಆರೋಪಿಸಿದರು. ತಾಲ್ಲೂಕಿನ ಜನರು ಸ್ವಯಂಪ್ರೇರಿತರಾಗಿ ಬಂದ್ ಮಾಡುವುದಾಗಿದ್ದರೆ ಶನಿವಾರ ಅಥವಾ ಭಾನುವಾರ ಮಾಡುತ್ತಿದ್ದರು. ಬಸ್, ಅಂಗಡಿ ಮಾಲೀಕರಿಗೆ ಬಿಜೆಪಿ ಮುಖಂಡರು, ಅಧಿಕಾರಿಗಳು ಒತ್ತಡದ ಮೂಲಕ ಬಂದ್ ಮಾಡುವಂತೆ ಹೇಳಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry