ಸೋಮವಾರ, ಸೆಪ್ಟೆಂಬರ್ 16, 2019
26 °C

ಬಲ ಪಡೆಯುತ್ತಿರುವ ಜೆಡಿಎಸ್: ಸುನೀಲ

Published:
Updated:

ಯಲ್ಲಾಪುರ: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು ಜನರು  ಬಿಜೆಪಿಯ ದುರಾಡಳಿತ ಮತ್ತು ನಿಷ್ಕ್ರಿಯ ಕಾಂಗ್ರೆಸ್ ಪಕ್ಷವನ್ನು ನೋಡಿ ಬೇಸತ್ತಿದ್ದಾರೆ.  ಇದೆಲ್ಲದರ ಮಧ್ಯ ಜೆಡಿಎಸ್ ಬಲಶಾಲಿಯಾಗುತ್ತಿದೆ ಎಂದು ಶಾಸಕ ಸುನೀಲ ಹೆಗಡೆ ಹೇಳಿದರು.ತಾಲ್ಲೂಕಿನ ಕಿರವತ್ತಿಯ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ಈಚೆಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂಬರುವ ಚುನಾವಣೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಡಿ. ಅನಿಲ ಕುಮಾರ ಅವರ ನೇತೃತ್ವದಲ್ಲಿ ಪಕ್ಷ ಪ್ರಬ ಲವಾಗುತ್ತಿದೆ ಎಂದರು.ಜಿಲ್ಲೆಯ ಉಸ್ತುವಾರಿ ಸಚಿವರು ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಕಾಂಗ್ರೆಸ್ ವರ್ಚಸ್ಸು ಕಳೆ ದುಕೊಂಡಿದೆ ಎಂದು ಅವರು ಹೇಳಿದರು.  25 ವರ್ಷ ಶಾಸಕರಾಗಿ, ಮಂತ್ರಿ ಯಾಗಿದ್ದ ಆರ್.ವಿ. ದೇಶಪಾಂಡೆ ಜನರಿಗಾಗಿ ಏನೂ ಮಾಡಿಲ್ಲ ಎಂದು ದೂರಿದ ಅವರು, ಜೆಡಿಎಸ್‌ನಲ್ಲಿ ಹಲ ವಾರು ಜಾತಿ, ಜನಾಂಗದವರು ಇರು ವುದರಿಂದ ಪದಾಧಿಕಾರಿಗಳ ಆಯ್ಕೆ ವಿಳಂಬವಾಗಿದೆ ಎಂದರು. ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಜಿ.ಭಟ್ಟ ವಡ್ರಮನೆ, ಪ.ಪಂ. ಅಧ್ಯಕ್ಷ ಪಿ.ಟಿ.ಮರಾಠೆ, ತಾ.ಪಂ.ಮಾಜಿ ಅಧ್ಯಕ್ಷ ಶಬ್ಬೀರ್ ಶೇಕ್ ಹಾಗೂ ಮುಖಂಡ ಡಿ.ಅನಿಲಕುಮಾರ ಉಪಸ್ಥಿತರಿದ್ದರು.

Post Comments (+)