ಬಳಕೆದಾರರ ಅಭಿವೃದ್ಧಿ ಶುಲ್ಕ ಪರಿಷ್ಕರಿಸಲು ಎಇಆರ್‍ಎ ನಿರ್ದೇಶನ

7

ಬಳಕೆದಾರರ ಅಭಿವೃದ್ಧಿ ಶುಲ್ಕ ಪರಿಷ್ಕರಿಸಲು ಎಇಆರ್‍ಎ ನಿರ್ದೇಶನ

Published:
Updated:

ಬೆಂಗಳೂರು: ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್‌) ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು (ಯುಡಿಎಫ್) ಪರಿಷ್ಕರಿಸಲು ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‍ಎ) ಬುಧವಾರ ನಿರ್ದೇಶನ ನೀಡಿದೆ.ದೇಶೀಯ ಪ್ರಯಾಣಿಕರಿಗೆ ಶೇ 240 ಹಾಗೂ ವಿದೇಶಿ ಪ್ರಯಾಣಿ ಕರಿಗೆ ಶೇ 70ರಷ್ಟು ಬಳಕೆದಾರ ಅಭಿ ವೃದ್ಧಿ ಶುಲ್ಕ ಹೆಚ್ಚಳಕ್ಕೆ ಬಿಐಎಲ್ಎಲ್‌ ಈ ಹಿಂದೆ ಎಇಆರ್‌ಎಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಈ ಶುಲ್ಕ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಎಇಆರ್‌ಎ ಹೊಸದಾಗಿ ಶುಲ್ಕ ಪ್ರಸ್ತಾವ ಸಲ್ಲಿಸು ವಂತೆ ಬಿಐಎಲ್ಎಲ್‌ಗೆ ಸೂಚಿಸಿದೆ. ಹೀಗಾಗಿ ಅ.1ರಿಂದ ನೂತನ ಶುಲ್ಕ ಜಾರಿಗೆ ಬರುವುದು ಅನುಮಾನವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry