ಬಳಕೆದಾರರ ಅಭಿವೃದ್ಧಿ ಶುಲ್ಕ ಹೆಚ್ಚಳ ಸಾಧ್ಯತೆ

7
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಬಳಕೆದಾರರ ಅಭಿವೃದ್ಧಿ ಶುಲ್ಕ ಹೆಚ್ಚಳ ಸಾಧ್ಯತೆ

Published:
Updated:

ಬೆಂಗಳೂರು: ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್‌) ಅಕ್ಟೋಬರ್‌ ಒಂದರಿಂದ ಬಳಕೆದಾರ ಅಭಿವೃದ್ಧಿ ಶುಲ್ಕ (ಯುಡಿಎಫ್)  ಹೆಚ್ಚಳವಾಗುವ ಸಾಧ್ಯತೆ ಇದೆ.ಪರಿಷ್ಕೃತ ಶುಲ್ಕ ಪ್ರಸ್ತಾವಕ್ಕೆ ಗುರುವಾರದೊಳಗೆ ಆಕ್ಷೇಪಣೆ ಮತ್ತು ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ) ತಿಳಿಸಿತ್ತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತದರ ಷೇರುದಾರ ಕಂಪೆನಿಗಳು ಪರಿಷ್ಕೃತ ಶುಲ್ಕ ಪ್ರಸ್ತಾವವನ್ನು ಪ್ರಾಧಿಕಾರಕ್ಕೆ ಸಲ್ಲಿಸಿದ್ದು, ಅ.1ರಿಂದ ನೂತನ ಶುಲ್ಕ ಜಾರಿಗೆ ಬರಲಿದೆ.ದೇಶೀಯ ಪ್ರಯಾಣಿಕರಿಗೆ ಶೇ 240 ಹಾಗೂ ವಿದೇಶಿ ಪ್ರಯಾಣಿಕರಿಗೆ ಶೇ 70ರಷ್ಟು ಬಳಕೆದಾರ ಅಭಿವೃದ್ಧಿ ಶುಲ್ಕ ಹೆಚ್ಚಳಕ್ಕೆ ಬಿಐಎಲ್ಎಲ್‌ ಈ ಹಿಂದೆ ಎಇಆರ್‌ಎಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಆ ಪ್ರಸ್ತಾವವನ್ನು ತಿರಸ್ಕರಿಸಿದ್ದ ಎಇಆರ್‌ಎ, ದೇಶೀಯ ಪ್ರಯಾಣಿಕರಿಗೆ ರೂ.262.32 ಹಾಗೂ ವಿದೇಶಿ ಪ್ರಯಾಣಿಕರಿಗೆ ರೂ.1,049.27 ಬಳಕೆದಾರ ಅಭಿವೃದ್ಧಿ ಶುಲ್ಕ ವಿಧಿಸುವಂತೆ ಬಿಐಎಎಲ್‌ಗೆ ಸೂಚಿಸಿತ್ತು.ಆದರೆ, ಜುಲೈ 30ರಂದು ಎಇಆರ್‌ಎಗೆ ಬರೆದ ಪತ್ರದಲ್ಲಿ ದೆಹಲಿ ಹಾಗೂ ಮುಂಬೈ ವಿಮಾನ ನಿಲ್ದಾಣಗಳಂತೆ ‘ಹೈಬ್ರೀಡ್‌ ಟಿಲ್‌’ ಮಾದರಿಯಲ್ಲಿ ನಿಲ್ದಾಣ ಅಭಿವೃದ್ಧಿ ಪಡಿಸಲು ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಬೇಕು ಎಂದು ಬಿಐಎಎಲ್‌ ಒತ್ತಾಯಿಸಿತ್ತು.ವಿಮಾನ ನಿಲ್ದಾಣದಲ್ಲಿ  ಜಿವಿಕೆ ಶೇ 43, ಸೀಮೆನ್ಸ್ ಶೇ 26, ಜ್ಯೂರಿಕ್‌ ವಿಮಾನ ನಿಲ್ದಾಣ ಶೇ 5, ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ ಶೇ 13 ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಶೇ 13ರಷ್ಟು ಪಾಲು ಹೊಂದಿವೆ. ಅಲ್ಲದೆ, ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ₨ 150 ಕೋಟಿ ಸಹಭಾಗಿತ್ವ ಪಾಲನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry