ಬುಧವಾರ, ಅಕ್ಟೋಬರ್ 16, 2019
21 °C

ಬಳಕೆ ತಪ್ಪಿದ ಕನ್ನಡ ಪದಗಳು

Published:
Updated:

ಕನ್ನಡದ ಅನೇಕ ಪದಗಳು ಬಳಕೆಯಿಂದ ಜಾರಿ ಹೋಗಿವೆ. ಬಳಕೆಯಾಗದೇ ಇರುವ ಅಪರೂಪದ ಪದಗಳನ್ನು ಇಲ್ಲಿ ಪಟ್ಟಿ ಮಾಡುತ್ತ ಹೋದರೆ ಅದೇ ಒಂದು ಲೇಖನವಾದೀತು. ಹೊಸ ತಲೆಮಾರಿನ ಕನ್ನಡಿಗರಿಗೆ ಪರಿಚಯವೇ ಇಲ್ಲದ ಅನೇಕ ಪದಗಳಿವೆ. ಶುದ್ಧ ಕನ್ನಡ ಪದಗಳನ್ನು ಮಾತುಗಳಲ್ಲಿ ಮತ್ತು ಬರವಣಿಗೆಯಲ್ಲಿ ಬಳಕೆಯಾಗದೇ ಇರುವುದರಿಂದ ಅನೇಕರಿಗೆ ಇವುಗಳ ಮಹತ್ವ ಗೊತ್ತಿಲ್ಲ. ಕನ್ನಡಿಗರು ಮರೆತಿರುವ ಶುದ್ಧ ಕನ್ನಡ ಪದಗಳನ್ನು ಬಳಸುವ ಕೆಲಸ ಮಾಧ್ಯಮಗಳಲ್ಲಿ ಆಗಬೇಕು. ಕನ್ನಡ ಪತ್ರಿಕೆಗಳು ಮನಸ್ಸು ಮಾಡಿದರೆ ಈ ಪದಗಳನ್ನು ಮತ್ತೆ ಚಲಾವಣೆಗೆ ತರುವುದು ಸುಲಭವಾಗುತ್ತದೆ. ದೈನಂದಿನ ಬದುಕಿನಲ್ಲಿ ಬಳಸಬಹುದಾದ ಅನೇಕ ವಿಶಿಷ್ಟ ಪದಗಳನ್ನು ನಮ್ಮ ಗ್ರಾಮೀಣ ಜನರು ಇಂದಿಗೂ ಬಳಸುತ್ತಿದ್ದಾರೆ.

 

ನಗರ ಪ್ರದೇಶಗಳ ಜನರೂ ಅವನ್ನು ಬಳಸಬೇಕಿದೆ. ಕನ್ನಡ ಸಾಹಿತಿಗಳು ಮತ್ತು ವಿದ್ವಾಂಸರು ಪದೇ ಪದೇ ಬಳಸುವ ಮೂಲಕ ಕನ್ನಡದ ಸೊಗಡನ್ನು ಎಲ್ಲ ಕನ್ನಡಿಗರಿಗೂ ಪರಿಚಯಿಸಬೇಕೆಂದು ವಿನಂತಿಸುತ್ತೇನೆ.

Post Comments (+)