ಬಳ್ಳಾರಿ: ಆರ್‌ಎಸ್‌ಎಸ್‌ ಬೈಠಕ್‌ ಆರಂಭ

7

ಬಳ್ಳಾರಿ: ಆರ್‌ಎಸ್‌ಎಸ್‌ ಬೈಠಕ್‌ ಆರಂಭ

Published:
Updated:

ಬಳ್ಳಾರಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯ­ಕರ್ತರ ರಾಜ್ಯ ಮಟ್ಟದ ಬೈಠಕ್‌ ನಗರದ ಕೊಟ್ಟೂರು ಸ್ವಾಮಿ ಮಠದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆರಂಭವಾಯಿತು.ನಾಲ್ಕು ದಿನಗಳ ಕಾಲ ನಡೆಯುವ ಈ ಬೈಠಕ್‌ನಲ್ಲಿ ರಾಜ್ಯದ 150ಕ್ಕೂ ಹೆಚ್ಚು ಪ್ರಮುಖ ಮುಖಂಡರು ಹಾಗೂ ಸಂಘಟನೆಯ ಮುಖ್ಯಸ್ಥ ಮೋಹನ್‌ ಭಾಗವತ್ ಪಾಲ್ಗೊಂಡಿದ್ದಾರೆ.ಸಂಘ ಪರಿವಾರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಬಿಜೆಪಿಯ ರಾಜ್ಯ, ರಾಷ್ಟ್ರೀಯ ಘಟಕಗಳ ಪ್ರಮು­ಖರು ಶನಿವಾರ ನಡೆಯುವ ಸಭೆ­ಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್‌,  ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್‌, ಸದಾನಂದಗೌಡ ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry