ಭಾನುವಾರ, ಮೇ 9, 2021
26 °C

ಬಳ್ಳಾರಿ: ಈರುಳ್ಳಿ ರೈತರ ಕಣ್ಣೀರು

ಸಿದ್ದಯ್ಯ ಹಿರೇಮಠ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಿಲ್ಲೆಯ ವಿವಿಧೆಡೆ ಬೇಸಿಗೆ ಅವಧಿಯ ಈರುಳ್ಳಿ ಬೆಳೆದಿರುವ ನೂರಾರು ರೈತರು ಇಳುವರಿ ಕಡಿಮೆ ಬಂದ ಸಂಕಷ್ಟದಲ್ಲಿರುವಾಗಲೇ ಉತ್ತಮ ಬೆಲೆಯೂ ದೊರೆಯದೆ ಕಂಗಾಲಾಗಿದ್ದಾರೆ.ಜ್ಲ್ಲಿಲೆಯ ಸಂಡೂರು, ಹೊಸಪೇಟೆ, ಬಳ್ಳಾರಿ ಮತ್ತು ಹೂವಿನ ಹಡಗಲಿ ತಾಲ್ಲೂಕಿನ ಕೆಲವೆಡೆ ನೀರಾವರಿ ಆಶ್ರಿತ ಭೂಮಿಯಲ್ಲಿ ಬೆಳೆಯಲಾಗುವ ಈರುಳ್ಳಿ ಈಗ ಕೈಗೆ ಬಂದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯದೆ ಖರ್ಚು ಮಾಡಿದ ಬಂಡವಾಳವೂ ವಾಪಸ್ ಬಾರದೆ, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.ಸಂಡೂರು ತಾಲ್ಲೂಕಿನ ಕುರೇಕೊಪ್ಪ, ವಡ್ಡು, ಬಸಾಪುರ, ಭುಜಂಗನಗರ, ತಾಳೂರು, ಲಕ್ಷ್ಮಿಪುರ, ಹೊಸಪೇಟೆ ತಾಲ್ಲೂಕಿನ ಗಾದಿಗನೂರು, ಭುವನಹಳ್ಳಿ, ಧರ್ಮಸಾಗರ, ಬೈಲುವದ್ದಿಗೇರಿ, ಗುಂಡ್ಲುವದ್ದಿಗೇರಿ, ಕೊಟಗಿನಹಾಳ್, ಹೂವಿನ ಹಡಗಲಿ ತಾಲ್ಲೂಕಿನ ಸೋಗಿ, ಇಟಗಿ ಮತ್ತಿತರ ಗ್ರಾಮಗಳಲ್ಲಿ ಡಿಸೆಂಬರ್, ಜನವರಿ ವೇಳೆಗೆ ಬೇಸಿಗೆ ಈರುಳ್ಳಿ ಬಿತ್ತನೆ ಮಾಡಲಾಗಿದೆ.

 

ಅಂತರ್ಜಲ ಕುಸಿತ ಮತ್ತು ವಿದ್ಯುತ್ ಸಮಸ್ಯೆಯಿಂದ ಅರ್ಧದಷ್ಟು ಇಳುವರಿ ಕಡಿಮೆಯಾಗಿದೆ. ಅಲ್ಲದೆ, ಇದೀಗ  ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ಕೇವಲ ರೂ 200ರಿಂದ ರೂ 450ರಷ್ಟು ಬೆಲೆ ಸಿಗುತ್ತಿರುವುದರಿಂದ, `ಬರಗಾಲದಲ್ಲಿ ಅಧಿಕ ಮಾಸ~ ಎಂಬ ಸ್ಥಿತಿ ಸೃಷ್ಟಿಯಾಗಿದೆ.ಸಕಾಲಕ್ಕೆ ನೀರು ಲಭ್ಯವಾಗದ್ದರಿಂದ ಈರುಳ್ಳಿ ಗಾತ್ರದಲ್ಲೂ ವ್ಯತ್ಯಾಸ ಕಂಡುಬಂದಿದ್ದು, ಚಿಕ್ಕ ಮತ್ತು ಮಧ್ಯಮ ಗಾತ್ರದ ಈರುಳ್ಳಿಗೆ ಕನಿಷ್ಠ ರೂ 200ರಿಂದ ಗರಿಷ್ಠ ರೂ 450 ದೊರೆಯುತ್ತಿದೆ. ಇಷ್ಟು ಕಡಿಮೆ ಬೆಲೆ ದೊರೆಯುವುದಾದರೆ ಕೂಲಿ ಕೊಟ್ಟು ಕೀಳಿಸುವುದೇ ಬೇಡ ಎಂದೇ ರೈತರು ಈರುಳ್ಳಿಯನ್ನು ಭೂಮಿಯಲ್ಲೇ ಬಿಡುವಂತಾಗಿದೆ ಎಂದು ಭುಜಂಗನಗರದ ರೈತರಾದ ಕುಮಾರಸ್ವಾಮಿ ಹಾಗೂ ಗಿರೀಶ ತಿಳಿಸುತ್ತಾರೆ.ಈ ಭಾಗದಲ್ಲಿ 2 ಸಾವಿರಕ್ಕೂ ಅಧಿಕ ಎಕರೆಯಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಸರ್ಕಾರ ಕೂಡಲೇ ಬೆಂಬಲ ಬೆಲೆ ಮೂಲಕ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.