ಬಳ್ಳಾರಿ ಮತ ಮರು ಎಣಿಕೆ: ಹೈಕೋರ್ಟ್‌ನಿಂದ ಅರ್ಜಿ ವಜಾ

7

ಬಳ್ಳಾರಿ ಮತ ಮರು ಎಣಿಕೆ: ಹೈಕೋರ್ಟ್‌ನಿಂದ ಅರ್ಜಿ ವಜಾ

Published:
Updated:

ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಮತಗಳ ಮರು ಎಣಿಕೆ ನ್ಯಾಯಾಲಯದ ನಿರ್ದೇಶನದಂತೆ ನಡೆದಿಲ್ಲ ಎಂದು ದೂರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾ ಮಾಡಿದೆ.ಎಂ. ಚಂದ್ರೇಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್. ಬಿಳ್ಳಪ್ಪ ಅವರು, `ಮರು ಎಣಿಕೆ ನ್ಯಾಯಾಲಯದ ನಿರ್ದೇಶನದಂತೆ ನಡೆದಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿನ ಫಲಿತಾಂಶ ಹಾಗೂ ಮರು ಎಣಿಕೆ ಫಲಿತಾಂಶದ ನಡುವೆ ವ್ಯತ್ಯಾಸ ಕಂಡುಬಂದಿಲ್ಲ' ಎಂದು ಹೇಳಿ ಅರ್ಜಿ ವಜಾ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry