ಬಳ್ಳಾರಿ ವಿದ್ಯಾರ್ಥಿನಿಗೆ ಲೀಡ್ಸ್ ವಿವಿ ರ‌್ಯಾಂಕ್

7

ಬಳ್ಳಾರಿ ವಿದ್ಯಾರ್ಥಿನಿಗೆ ಲೀಡ್ಸ್ ವಿವಿ ರ‌್ಯಾಂಕ್

Published:
Updated:

ಬಳ್ಳಾರಿ: ಇಂಗ್ಲೆಂಡ್‌ನ ಲೀಡ್ಸ್ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಬಳ್ಳಾರಿ ಮೂಲದ ವಿದ್ಯಾರ್ಥಿನಿ ಅರ್ಚನಾ ಚಂದ್ರಕಾಂತ್ ಕೊಂಡಕುಂದಿ ಎಂ.ಎಸ್ಸಿ ಪದವಿಯಲ್ಲಿ ಪ್ರಥಮ ರ‌್ಯಾಂಕ್ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.`ಪ್ರೊಡಕ್ಟಿವಿಟಿ ಅಂಡ್ ಇನೊವೇಷನ್ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್~ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ರ‌್ಯಾಂಕ್ ಗಳಿಸಿದ್ದಾಗಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸ್ಥಳೀಯ ರಾವ್‌ಬಹದ್ದೂರ್ ವೈ. ಮಹಾಬಳೇಶ್ವರಪ್ಪ ಎಂಜಿನಿಯರಿಂಗ್‌ಕಾಲೇಜಿನಲ್ಲಿ `ಎಲೆಕ್ಟ್ರಾನಿಕ್ಸ್~ ವಿಷಯದಲ್ಲಿ ಪದವಿ ಪಡೆದಿದ್ದಲ್ಲದೆ, ಎಂಬಿಎ ಪದವಿ ಪಡೆದಿರುವುದಾಗಿ ತಿಳಿಸಿದರು.`ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ಫಿಶ್ ಇನ್ಸ್‌ಪೆಕ್ಟರ್ಸ್‌~ ಸಂಸ್ಥೆ ಆಶ್ರಯದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿ ನಡೆದ `ಜಾಗತಿಕ ಸೀ ಫುಡ್ ಕಾಂಗ್ರೆಸ್~ನಲ್ಲಿ ಏರ್ಪಡಿಸಿದ್ದ ಇಂಟರ್‌ನ್ಯಾಷನಲ್ ಸೈಂಟಿಫಿಕ್ ಪೋಸ್ಟರ್ ಕಾಂಪಿಟೇಷನ್‌ನಲ್ಲಿ ಮಂಡಿಸಿರುವ `ಸ್ಟ್ರಾಟೆಜಿಕ್ ಅಲಯನ್ಸ್ ಆ್ಯಸ್ ಆನ್ ಇಫೆಕ್ಟಿವ್ ಇಂಟರ್‌ನ್ಯಾಷನಲ್ ಸ್ಟ್ರಾಟೆಜಿ ಟು ಇಂಪ್ರೂವ್ ಸೀ ಫೂಡ್ ಟ್ರೇಡ್ ಬಿಟ್ವೀನ್ ಇಂಡಿಯಾ ಅಂಡ್ ಯುಕೆ~ ವಿಷಯದ ಪ್ರಬಂಧಕ್ಕೆ 3ನೇ ಬಹುಮಾನ ಪಡೆದಿರುವುದಾಗಿ ಹೇಳಿದರು.ಈ ಸ್ಪರ್ಧೆಯಲ್ಲಿ ತೃತಿಯ ಬಹುಮಾನವಾಗಿ 500 ಅಮೆರಿಕ ಡಾಲರ್ ನಗದನ್ನೂ ಗಳಿಸಿದ್ದು, ತಾವು ಪ್ರತಿನಿಧಿಸಿದ ಕಾಲೇಜು ಹಾಗೂ ಭಾರತಕ್ಕೆ ಕೀರ್ತಿ ದೊರೆತಿದೆ ಎಂದು ಅವರು ಹೇಳಿದರು.`ಮುಖ್ಯವಾಗಿ ಭಾರತದಿಂದ ಇಂಗ್ಲೆಂಡ್‌ಗೆ ರಫ್ತಾಗುವ ಸಾಗರೋತ್ಪನ್ನ ಆಹಾರಕ್ಕೆ ಭಾರಿ ಬೇಡಿಕೆ ಇದ್ದು, ಗುಣಮಟ್ಟದಿಂದ ಕೂಡಿರುವ ಇಲ್ಲಿನ ಸಾಗರೋತ್ಪನ್ನ ಆಹಾರವನ್ನು ರಫ್ತು ಮಾಡಲು ಇಲ್ಲಿನ ಮೀನುಗಾರಿಕೆ ವಲಯಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ, ರಫ್ತಿನ ವೇಳೆ ಗುಣಮಟ್ಟ ಕಾಪಾಡುವಲ್ಲಿನ ನ್ಯೂನತೆಗಳೂ ವ್ಯಾಪಾರ- ವಹಿವಾಟಿಗೆ ಅಡಚಣೆ ಉಂಟುಮಾಡಿವೆ.

 

ಇದೀಗ ಗಳಿಸಿರುವ ಅನುಭವವನ್ನು ಭವಿಷ್ಯದಲ್ಲಿ ಸಾಗರೋತ್ಪನ್ನ ಆಹಾರದ ರಫ್ತುಉದ್ಯಮದಲ್ಲಿ ವಿನಿಯೋಗಿಸಿ ಭಾರತೀಯ ರಫ್ತುದಾರರಿಗೆ ನೆರವಾಗುವ ಆಲೋಚನೆ ಇದೆ~ ಎಂದರು. ಅರ್ಚನಾ ತಂದೆ ಚಂದ್ರಕಾಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry