ಸೋಮವಾರ, ಆಗಸ್ಟ್ 19, 2019
22 °C

ಬಳ್ಳಾರಿ `ವಿಮ್ಸ' ಗೆ 50 ಹೆಚ್ಚುವರಿ ಎಂಬಿಬಿಎಸ್ ಸೀಟು

Published:
Updated:

ನವದೆಹಲಿ: ಭಾರತೀಯ ವೈದ್ಯಕೀಯ ಮಂಡಳಿಯು (ಎಂಸಿಐ) ಪ್ರಸಕ್ತ ವರ್ಷದಿಂದ (2013-14) ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ವಿಮ್ಸ) ಮತ್ತೆ 50 ಎಂಬಿಬಿಎಸ್ ಸೀಟುಗಳ ಸಂಖ್ಯೆ ಹೆಚ್ಚಿಸಿದೆ.ಸರ್ಕಾರಿ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಆರೋಗ್ಯ ಸಚಿವಾಲಯ ಅನುಮತಿ ನೀಡಿದ ಬೆನ್ನಲ್ಲೇ ಗುರುವಾರ ಎಂಸಿಐನ ಈ ನಿರ್ಧಾರ ಹೊರಬಿದ್ದಿದೆ.ಬಳ್ಳಾರಿಯ `ವಿಮ್ಸ' ಈ ಬಾರಿ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಅನುಮತಿ ಪಡೆದ ಕರ್ನಾಟಕದ ಏಕೈಕ ಕಾಲೇಜ್. ಇದರಿಂದಾಗಿ ಎಂಬಿಬಿಎಸ್ ಸೀಟುಗಳ ಸಂಖ್ಯೆ ನೂರರಿಂದ 150ಕ್ಕೆ ಹೆಚ್ಚಲಿದೆ.

Post Comments (+)