ಭಾನುವಾರ, ಜನವರಿ 19, 2020
24 °C

ಬಸರಾಳು: ಪರಿಸರ ಉಳಿಸಲು ಜಾಗೃತಿಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಪರಿಸರ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲು `ಹಸಿರಿನೆಡೆಗೆ~ ಶೀರ್ಷಿಕೆಯಡಿ ಜಾಥಾವನ್ನು ತಾಲ್ಲೂಕಿನ ಬಸರಾಳುವಿನಲ್ಲಿ ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಭೂಮಿಕಾ ಇಕೋ ಕ್ಲಬ್ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿತ್ತು.`ಕಾಡಿದ್ದರೆ ಕ್ಷೇಮ, ಕಡಿದರೆ ಕ್ಷಾಮ; ಹಸಿರು ಬೆಳಸಿ, ನಾಡು ಉಳಿಸಿ; ಮನೆಗೊಂದು ಮರ, ಊರಿಗೊಂದು ವನ~ ಫಲಕಗಳನ್ನು ಹಿಡಿದ್ದ ವಿದ್ಯಾರ್ಥಿ ಗಳು ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆಯಲು ಯತ್ನಿಸಿದರು.ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಉಪ ಪ್ರಾಚಾರ್ಯ ಡಿ.ಕೃಷ್ಣಪ್ಪ, ಪರಿಸರ ಸಂರಕ್ಷಣೆ ಪ್ರತಿಯೊ ಬ್ಬರೂ ಹೊಣೆ. ಗಿಡಿ, ಸಸಿಗಳನ್ನು ನೆಟ್ಟು ವನಸಂವರ್ಧನೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಯುವ ಸಮುದಾಯ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.`ಅಬ್ಬಿ~ ಪರಿಸರ ಸಂಘದ ಎಚ್.ಕೆ.ನಟರಾಜ್, ಸಹ ಶಿಕ್ಷಕಿಯರಾದ ಪಿ.ಕೆ.ರುಕ್ಮಿಣಿ, ಆರ್.ವಿ.ಪದ್ಮಾವತಿ, ಚಂದ್ರಕಲಾ ಸೇರಿದಂತೆ ಇತರೆ ಶಾಲಾ ಸಿಬ್ಬಂದಿ ಹಾಜರಿದ್ದರು.

 

ಪ್ರತಿಕ್ರಿಯಿಸಿ (+)