ಬುಧವಾರ, ಮೇ 19, 2021
22 °C

ಬಸವಕಲ್ಯಾಣದಿಂದ ಶ್ರೀರಾಮಲು ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬಿಆರ್‌ಎಸ್ ಪಕ್ಷದ ಸಂಸ್ಥಾಪಕ ಶ್ರೀರಾಮಲು ಅವರ ನೇತೃತ್ವದಲ್ಲಿ ಬಸವಕಲ್ಯಾಣದಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ತಿಳಿಸಿದರು.

ಬಸವ ಜಯಂತಿಯ ದಿನವಾದ ಏಪ್ರಿಲ್ 24 ರಂದು ಬಸವಕಲ್ಯಾಣದಲ್ಲಿ ಪಾದ್ರಯಾತ್ರೆ ಆರಂಭವಾಗಲಿದೆ.ಯಾತ್ರೆಯು 40 ವಿಧಾನಸಭಾ ಕ್ಷೇತ್ರಗಳ 921 ಕಿ.ಮೀ. ಕ್ರಮಸಲಿದೆ. ಜೂನ್ 17 ರಂದು ಬೆಂಗಳೂರಿಗೆ ತಲುಪಲಿದೆ. ಅಂದು ಬೆಂಗಳೂರಿನಲ್ಲಿ ಬೃಹತ್ ಬಹಿರಂಗ ಸಭೆ ಏರ್ಪಡಿಸಲಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪ್ರಸ್ತುತ ರಾಜಕೀಯ ವ್ಯವಸ್ಥೆ ಹಾಳಾಗಿದೆ. ಜನ ಬೇಸತ್ತು ಹೋಗಿದ್ದಾರೆ. ಬದಲಾವಣೆ ಬಯಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಶ್ರೀರಾಮಲು ಬಿ.ಆರ್.ಎಸ್. ಪಕ್ಷ ಸ್ಥಾಪಿಸಿದ್ದಾರೆ. ಬಸವ ಜಯಂತಿಯಂದು ಪಕ್ಷ ಸದಸ್ಯತ್ವ ನೋಂದಣಿಗೆ ಚಾಲನೆ ದೊರೆಯಲಿದೆ ಎಂದು ಹೇಳಿದರು.ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಕಳೆದ ಆರು ದಶಕಗಳಲ್ಲಿ ಯಾವುದೇ ಸರ್ಕಾರಗಳು ಮುತುವರ್ಜಿ ವಹಿಸಿಲ್ಲ. ಈ ಭಾಗದವರೇ ಆದ ವೀರೇಂದ್ರ ಪಾಟೀಲ್ ಹಾಗೂ ಎನ್. ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದರೂ ಈ ಭಾಗದ ಬಗ್ಗೆ ಕಾಳಜಿ ತೋರಲಿಲ್ಲ ಎಂದು ಆಪಾದಿಸಿದರು.ಪಾದಯಾತ್ರೆಯ ಸಂಚಾಲಕ ಕೆ. ರಾಜೀವ್ ಮಾತನಾಡಿ, ಪಾದಯಾತ್ರೆಯಲ್ಲಿ ಪಾಳ್ಗೊಳ್ಳಲು ಈಗಾಗಲೇ 5,318 ಜನರು ಹೆಸರು ನೊಂದಾಯಿಸಿದ್ದಾರೆ. ಹೆಸರು ನೋಂದಣಿ ಮಾಡಲು ಇಚ್ಛಿಸುವವರು 7259644999 ಮತ್ತು 7259655999 ಮೊಬೈಲ್ ಸಂಖ್ಯೆ ಕರೆ ಮಾಡಬಹುದು ಎಂದರು. ಏಪ್ರಿಲ್ 24 ರಂದು ಬೆಳಿಗ್ಗೆ 8 ಗಂಟೆಗೆ ಬಸವಕಲ್ಯಾಣದಲ್ಲಿ ಬಸವೇಶ್ವರ ಮಂದಿರ, ಬುದ್ಧವಿಹಾರ, ಚರ್ಚ್ ಮತ್ತು ದರ್ಗಾಕ್ಕೆ ಶ್ರೀರಾಮಲು ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಕಿಲ್ಲಾದಿಂದ ಥೇರ್ ಮೈದಾನದವರೆಗೆ ಶ್ರೀರಾಮಲು ಅವರ ಮೆರವಣಿಗೆ ನಡೆಯಲಿದೆ. ನಂತರ ಥೇರ್ ಮೈದಾನದಲ್ಲಿ ಬಹಿರಂಗ ಸಭೆ ಜರುಗಲಿದೆ. ಸಭೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಬಹಿರಂಗ ಸಭೆಯ ನಂತರ ಪಾದಯಾತ್ರೆಯು ರಾಜೋಳಾ ಗ್ರಾಮಕ್ಕೆ ವಾಸ್ತವ್ಯ ಮಾಡಲಿದೆ. ಏಪ್ರಿಲ್ 25 ರಂದು ಹುಮನಾಬಾದ್‌ನಲ್ಲಿ ತಂಗಲಿದೆ. ಪ್ರತಿದಿನ 15-20 ಕಿ.ಮೀ. ಪಾದಯಾತ್ರೆ ನಡೆಯಲಿದೆ. 56 ದಿನಗಳ ಪಾದಯಾತ್ರೆ ಇದಾಗಿದೆ ಎಂದು ವಿವರಿಸಿದರು.ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ್, ಜಿಲ್ಲಾ ಟೋಕರಿ ಕೋಳಿ ಸಮಾಜದ ಅಧ್ಯಕ್ಷ ಜಗನ್ನಾಥ ಜಮಾದಾರ್, ಮರಿಯಪ್ಪ ಸಿಂಧನೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.