ಶನಿವಾರ, ಮೇ 8, 2021
19 °C

ಬಸವಕಲ್ಯಾಣ: ಬೀಜ ಖರೀದಿ ಭರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಜೂನ್ ತಿಂಗಳ ಮೊದಲ ವಾರದಲ್ಲೇ ತಾಲ್ಲೂಕಿನಾದ್ಯಂತ ಸಮರ್ಪಕವಾದ ಮಳೆಯಾಗಿದ್ದರಿಂದ ಎಲ್ಲೆಡೆ ಬಿತ್ತನೆಗೆ ಸಿದ್ಧತೆ ಕೈಗೊಳ್ಳಲಾಗಿದ್ದು ಬೀಜ, ರಸಗೊಬ್ಬರ ಖರೀದಿ ಭರಾಟೆಯಿಂದ ನಡೆದಿದೆ.ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬೀಜಗಳು ಲಭ್ಯವಾಗುತ್ತಿರುವ ಕಾರಣ ಇಲ್ಲಿ ರೈತರು ನೂಕುನುಗ್ಗಲು ಮಾಡುತ್ತಿದ್ದಾರೆ. ಖಾಸಗಿ ಅಂಗಡಿಗಳಲ್ಲಿಯೂ ಎಲ್ಲ ರೀತಿಯ ಬೀಜಗಳು ಮತ್ತು ಗೊಬ್ಬರ ದೊರೆಯುತ್ತಿದೆ. ಆದರೂ ರೈತ ಸಂಪರ್ಕ ಕೇಂದ್ರದಲ್ಲಿನ ಬೆಲೆಗೆ 200 ರೂಪಾಯಿಯಿಂದ 500 ರೂಪಾಯಿಗಳವರೆಗೆ ವ್ಯತ್ಯಾಸ ಆಗುತ್ತಿದೆ. ಆದ್ದರಿಂದ ಇಲ್ಲಿನ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದೆರಡು ದಿನಗಳಲ್ಲಿ ಸೋಯಾಬಿನ್ ಬೀಜ ಬಸವಕಲ್ಯಾಣದ ರೈತ ಸಂಪರ್ಕ ಕೇಂದ್ರದಲ್ಲಿ 455 ಕ್ವಿಂಟಲ್, ರಾಜೇಶ್ವರದಲ್ಲಿ 215 ಕ್ವಿಂಟಲ್, ಕೊಹಿನೂರನಲ್ಲಿ 10 ಕ್ವಿಂಟಲ್‌ನಷ್ಟು ಮಾರಾಟವಾಗಿದೆ ಎಂದಿದ್ದಾರೆ. 

ದಾಸ್ತಾನು: ಸೋಯಾಬಿನ್ ಬೀಜವನ್ನು ಬಸವಕಲ್ಯಾಣ ಕೇಂದ್ರದಲ್ಲಿ 755 ಕ್ವಿಂಟಲ್, ಹುಲಸೂರನಲ್ಲಿ 682 ಕ್ವಿಂಟಲ್, ರಾಜೇಶ್ವರದಲ್ಲಿ 620 ಕ್ವಿಂಟಲ್, ಮುಡಬಿಯಲ್ಲಿ 445.20 ಕ್ವಿಂಟಲ್, ಮಂಠಾಳದಲ್ಲಿ 485.40 ಕ್ವಿಂಟಲ್, ಕೊಹಿನೂರನಲ್ಲಿ 258 ಕ್ವಿಂಟಲ್‌ನಷ್ಟು ದಾಸ್ತಾನು ಮಾಡಲಾಗಿದೆ. ತಾಲ್ಲೂಕಿಗೆ ಒಟ್ಟು 3441.66 ಕ್ವಿಂಟಲ್‌ನಷ್ಟು ವಿವಿಧ ಪ್ರಕಾರದ ಬೀಜ ಬಂದಿದ್ದು ಅದರಲ್ಲಿ 680 ಕ್ವಿಂಟಲ್ ಬೀಜ ಮಾರಾಟವಾಗಿದೆ ಎಂದು ಹೇಳಿದ್ದಾರೆ.ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಸೋಯಾಬಿನ್ ಬಿತ್ತುವುದು ಲಾಭದಾಯಕ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಅಥವಾ ಕಡಿಮೆ ಪ್ರಮಾಣದಲ್ಲಿ ಬಿದ್ದರೂ ಈ ಬೆಳೆಗೆ ಹಾನಿ ಆಗುವುದಿಲ್ಲ ಎಂದು ಕೃಷಿ ಅಧಿಕಾರಿಗಳಾದ ಪ್ರವೀಣ ಗಬಾಳೆ ಮತ್ತು ಶಿವಾನಂದ ಗೌಡಗಾವೆ ತಿಳಿಸಿದ್ದಾರೆ.ರಿಯಾಯಿತಿ: ತಾಲ್ಲೂಕಿನ 6 ರೈತ ಸಂಪರ್ಕ ಕೇಂದ್ರಗಳಲ್ಲಿ ಸೋಯಾಬಿನ್ ಬೀಜಕ್ಕೆ ಪ್ರತಿ ಕೆಜಿಗೆ 15 ರೂಪಾಯಿ ರಿಯಾಯಿತಿ ಇದೆ. ಬತ್ತಕ್ಕೆ ರೂ. 7, ಜೋಳಕ್ಕೆ ರೂ. 25, ತೊಗರಿಗೆ ರೂ. 20, ಉದ್ದು ರೂ. 20, ಹೆಸರು ರೂ. 20, ಸೂರ್ಯಕಾಂತಿ ರೂ. 80, ಸಜ್ಜೆ ರೂ.14, ಮೆಕ್ಕೆಜೋಳಕ್ಕೆ 35 ರೂಪಾಯಿ ರಿಯಾಯಿತಿ ಇದೆ ಎಂದು ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.