ಭಾನುವಾರ, ಮೇ 9, 2021
17 °C

ಬಸವಣ್ಣನವರ ತತ್ವ ಪಾಲಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಬಸವಣ್ಣನವರು ಸಮಾನತೆ ಬಿಂಬಿಸುವ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಅವರ ತತ್ವ ಆಚರಣೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ನಗರದ ತೋಂಟದಾರ್ಯ ಮಠದಲ್ಲಿ ಸೋಮವಾರ ನಡೆದ ಶಿವಾನುಭವ, ಡಾ. ಅಂಬೇಡ್ಕರ ಪುರಾಣ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜಾತಿಗಿಂತ ನೀತಿ- ನಡವಳಿಕೆ ಮುಖ್ಯ. ಹುಟ್ಟಿಗಿಂತ ಸಂಸ್ಕಾರ- ಸಂಸ್ಕೃತಿಗಳು ಮುಖ್ಯ ಎಂಬುದನ್ನು ಅರಿತು ಬದುಕು ನಡೆಸಬೇಕು ಎಂದರು.ದೇಶಕ್ಕೆ ಐಕ್ಯತೆ, ಸಮಾನತೆ, ಸುಭದ್ರತೆ ಸಾರುವ ಸಂವಿಧಾನ ನೀಡಿದ ಡಾ. ಅಂಬೇಡ್ಕರ ತತ್ವ ಚಿಂತನೆಗಳಲ್ಲಿ ಲಿಂಗಾಯತ ಸಮುದಾಯ ಪ್ರೇರಣೆ ಪಡೆದು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.ಎಲ್ಲ ಧರ್ಮ, ಜಾತಿಯ ಜನರನ್ನು ಸಮಾನತೆಯಿಂದ ಕಾಣುವ ಭಾವ ನೆಯನ್ನು ಎಲ್ಲರೂ ಬೆಳೆಸಿ ಕೊಳ್ಳಬೇಕು. ವಿಶಾಲ ಮನೋಭಾವ ನಮ್ಮದಾಗ ಬೇಕು ಎಂದರು. ಡಾ. ಅಂಬೇಡ್ಕರ ಅವರ ಜೀವನ ಸಾಧನೆಗಳು ಎಲ್ಲ ಧರ್ಮದ ಸಾಧಕರಿಗೆ ಆತ್ಮವಿಶ್ವಾಸ, ಧೈರ್ಯ, ಸತತ ಪರಿಶ್ರಮದ ಸಾಧನೆ ಮಾಡಲು ಪ್ರೇರಣೆ ನೀಡಬಲ್ಲ ಶಕ್ತಿ ಹೊಂದಿವೆ ಎಂದರು.ಅನುಸೂಚಿತ ಜಾತಿ ಪಂಗಡದ ರಾಜ್ಯ ಆಯೋಗದ ಅಧ್ಯಕ್ಷ, ಶಾಸಕ ನೆಹರೂ ಓಲೇಕಾರ ಅತಿಥಿಯಾಗಿ ಭಾಗವಹಿ ಸಿದ್ದರು. ಶ್ರಾವಣ ಮಾಸದ ಅಂಗವಾಗಿ ಡಾ. ಅಂಬೇಡ್ಕರ ಪುರಾಣ ಪ್ರವಚನ ನೀಡಿದ ರಾಮಣ್ಣ ಬ್ಯಾಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸ ಲಾಯಿತು. ಸಣ್ಣಸೂಗಪ್ಪ ಕಾರಟಗಿ, ಚೊಕ್ಕಾ ಬಸವನಗೌಡ, ಬಿ.ಡಿ. ಸಾವಕ್ಕನವರ, ಸೋಮಶೇಖರಪ್ಪ ಅನೂ ರಶೆಟ್ಟರ, ಅಕ್ಕಮಹಾದೇವಿ, ಸಿದ್ದಣ್ಣ ಮಾರನಬಸರಿ, ಚಂದ್ತು ತಡಸದ, ಬಾಲಚಂದ್ರ ಭರಮಗೌಡರ, ದಾನಪ್ಪ ತಡಸದ, ಪ್ರೊ. ಕೆ.ಎಚ್. ಬೇಲೂರ, ಎಂ.ಎ. ಹಂಚಿನಾಳ ಹಾಜರಿದ್ದರು.

ವೀರಣ್ಣ ಬೇವಿನಮರದ ಸ್ವಾಗತಿಸಿದರು. ಜಿ.ಪಿ. ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.