ಬುಧವಾರ, ಅಕ್ಟೋಬರ್ 16, 2019
22 °C

ಬಸವಣ್ಣನ ತತ್ವ ಪ್ರಚಾರವೇ ಮೇಳದ ಉದ್ದೇಶ

Published:
Updated:

ಕೂಡಲಸಂಗಮ: `ಲಿಂಗಾಯತ ಧರ್ಮವನ್ನು ಜಾಗತಿಕ  ಧರ್ಮಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಿ, ಸಾಂವಿಧಾನಿಕ ಮಾನ್ಯತೆಯನ್ನು ಪಡೆಯುವುದು, ಬಸವಣ್ಣನವರ ವಿಶ್ವಮಾನ್ಯ ತತ್ವಗಳನ್ನು ಬಿತ್ತರಿಸಿ ಕೂಡಲಸಂಗಮವನ್ನು ಅಂತರರಾಷ್ಟ್ರೀಯ ಕ್ಷೇತ್ರವನ್ನಾಗಿ ಮಾಡುವುದು ಶರಣ ಮೇಳದ ಪ್ರಮುಖ ಧ್ಯೇಯವಾಗಿದೆ~ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು.ಅವರು ಕೂಡಲಸಂಗಮದಲ್ಲಿ ನಡೆದ 25ನೇ ಶರಣ ಮೇಳದ ಮೊದಲನೇ ದಿನದ ರಾಷ್ಟ್ರೀಯ ಬಸವ ದಳದ ಅಧಿವೇಶನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಇಂದು ಧರ್ಮ ಪ್ರಚಾರ ಬಹಳ ಮುಖ್ಯವಾಗಿದೆ. ಜನರು ಧರ್ಮದ ಕಡೆಗೆ ಬರದೆ ಇದ್ದಾಗ ನಾವೇ ಧರ್ಮವನ್ನು ಜನರ ಕಡೆಗೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ ಲಿಂಗಾನಂದ ಸ್ವಾಮೀಜಿ, ಒಂದು ಬಸವ ಸಾಮ್ರೋಜ್ಯವನ್ನೇ ನಿರ್ಮಾಣ ಮಾಡಿದರು.

 

ಅವರು ಬಿತ್ತದ ಈ ಶರಣ ಮೇಳ ಇಂದು ಬೆಳ್ಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬಸವಣ್ಣ ಒಂದು ಜಾತಿಗೆ, ವರ್ಗಕ್ಕೆ ಸಿಮೀತರಲ್ಲ, ಇಡೀ ವಿಶ್ವಕ್ಕೆ ವಿಶ್ವಗುರು. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಮನೆ ಮನೆಗೆ ಮುಟ್ಟಿಸುವಂತಹ ಕಾರ್ಯವನ್ನು ಕೂಡಲಸಂಗಮ ಧರ್ಮ ಪೀಠದ ಮಾಡಬೇಕು ಎಂದು ಕರೆ ನೀಡಿದರು.ಸ್ವತಂತ್ರ ಧರ್ಮ ಮಾನ್ಯಕ್ಕಾಗಿ ದೆಹಲಿ ಜಾಥಾ

ಕೂಡಲ ಸಂಗಮ: 2012ರ ಬಸವತತ್ವ ಪ್ರಚಾರದ ಯೋಜನೆಯನ್ನು ವಿವರಿಸಿದ ಮಾತಾಜಿ ಅವರು.

* ಬಸವ ಜ್ಯೋತಿ ಕಾರ್ಯಕ್ರಮ ದೇಶದ ಎಲ್ಲ ಭಾಗದಲ್ಲಿ ನಡೆಯಬೇಕು.* ಪ್ರಾರ್ಥನಾ ಸಭೆಯನ್ನು ಪ್ರತಿ ಗ್ರಾಮದಲ್ಲಿ ಸಂಘಟಿಸಿ ಪ್ರಾರ್ಥನೆಯನ್ನು ನಿತ್ಯ ಮಾಡಬೇಕು.*ಲಿಂಗಾಯತ ಧರ್ಮ ಮಹಾಸಭಾವನ್ನು ಪ್ರತಿ ಗ್ರಾಮದಲ್ಲಿ ಪ್ರಾರಂಭಿಸಬೇಕು.ಎಲ್ಲರು ಇದರ ಸದಸ್ಯರಾಗಬೇಕು ಸಾಮಾನ್ಯ ಸದಸ್ಯರಾಗಲು 20 ರೂ , ಅಜೀವ ಸದಸ್ಯರಾಗಲು 250 ರೂ ಗಳನ್ನು ಕೊಡಬೇಕು.* ದೆಹಲಿ ಜಾಥಾ ; ಬಸವ ಧರ್ಮ ಪೀಠದ ವತಿಯಿಂದ 2012ರಲ್ಲಿ ದೆಹಲಿ ಜಾಥಾ ಕಾರ್ಯಕ್ರಮ ಮಾಡಲಾಗುವುದು ಇದರ ಮೂಲ ಉದ್ದೇಶ ಜೈನ, ಸಿಖ್, ಬೌದ್ಧ ಧರ್ಮಕ್ಕೆ ಯಾವ ರೀತಿ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೊಡಲಾಗಿದೆ ಅದೇ ರೀತಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೊಡಬೇಕು ಎಂದು ಕೇಂದ್ರ ಸರಕಾರಕ್ಕೆ ತಿಳಿಸಲು ಈ ಜಾಥಾ ಮಾಡಲಾಗುವುದು.*ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಅದು ಹಿಂದೂ ಧರ್ಮದಲ್ಲಿನ ಒಳ ಪಂಗಡ ಅಲ್ಲ ಎಂದು ಜನರಿಗೆ ತಿಳಿಸುವ ಕಾರ್ಯಕ್ರಮ.*ರಾಷ್ಟ್ರೀಯ ಬಸವ ದಳದವರು ಸಹೋದರತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ಕೊಟ್ಟರು.

Post Comments (+)