ಬಸವಣ್ಣನ ಮಾತುಗಳು ಸರಳ

7

ಬಸವಣ್ಣನ ಮಾತುಗಳು ಸರಳ

Published:
Updated:

ಧಾರವಾಡ: `ಬಸವಣ್ಣನವರ ಲೋಕಾ ನುಭವ ಬಹಳ ವಿಶಾಲವಾದದ್ದು, ಅವರು ಹೇಳಿದ ಮಾತುಗಳು ಸರಳ ಮತ್ತು ಸಾಮಾನ್ಯವಾದವುಗಳು. ಅವರು ಗ್ರಹಸ್ಥರಾದರೂ ಎಲ್ಲ ಗುರುಗಳಿಗೆ ಅತ್ಯಂತ ಪ್ರೀಯರಾಗಿದ್ದರು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ದ್ದರೂ ಧನವನ್ನು ಸ್ವೀಕರಿಸಲಾರದಂಥ ಉದಾತ್ತ ಗುಣವನ್ನು ಹೊಂದಿದ್ದರು~ ಎಂದು ಡಾ.ಬಿ.ಸಿ.ಜವಳಿ ಹೇಳಿದರು.ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಬಸವಕೇಂದ್ರ ಸಂಯುಕ್ತವಾಗಿ ಇತ್ತೀಚೆಗೆ ಅಯೋಜಿಸಿದ್ದ ಡಾ. ನಾಗನಗೌಡ ಅಯ್ಯನಗೌಡ ಪಾಟೀಲ ದತ್ತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಕಾಲದ ಹಿನ್ನೆಲೆ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.ಬಸವಣ್ಣನವರು ಜಗತ್ತಿನ ಶ್ರೇಷ್ಠ ಸಾಹಿತಿಗಳ, ಮಹಾಪುರುಷರ ಸಾಲಿನಲ್ಲಿ ಒಬ್ಬರಾಗಿದ್ದಾರೆ. ಅವರಲ್ಲಿ ಸ್ವಾರ್ಥ ಎಂಬುದೇ ಇರಲಿಲ್ಲ. ತಮ್ಮ ವಚನಗಳಿಂದ ಭಾರತದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಅವರು ರಚಿಸಿದ ವಚನಗಳ ಗ್ರಂಥಗಳನ್ನು ಇಂದಿಗೂ ಹಳ್ಳಿಗಳಲ್ಲಿ ಮನೆಯ ಜಗಲಿಯ ಮೇಲೆ ಇಟ್ಟು ಪೂಜಿಸುತ್ತಾರೆ ಎಂದರು.

 

ಆದರೆ ಬಸವಣ್ಣನವರ ವಿಚಾರಗಳು ಸಂಪ್ರ ದಾಯವಾದಿಗಳಿಗೆ ಕಬ್ಬಿಣದ ಕಡಲೆಯಾಗಿದ್ದವು. ಬಸವಣ್ಣನವರು ತಾವು ಮಾಡುವುದು ತಮ್ಮ ಸಂಸಾರ ಕ್ಕಾಗಿ ಅಲ್ಲ ಎಂದು ಹೇಳಿ ದವರು. ಕವಿ ಹರಿಹರನು ಭಕ್ತಿ ಭಂಡಾರಿ ಬಸವಣ್ಣ ಎಂದು ಕರೆದಿದ್ದಾರೆ. ಬಸವಣ್ಣ ನವರ ಪ್ರಕಾರ ಮಾನವರು ಪರರ ಉಪಕಾರಿಯಾಗಬೇಕು. ಅವರ ವಚನಗಳಲ್ಲಿ ತಾವು ಸತ್ಯವಾದಿ, ನ್ಯಾಯ ವಾದಿ, ನಿಷ್ಠುರ ವಾದಿ ಯಾಗಿದ್ದರು ಎಂಬುದನ್ನು ಕಾಣಬಹುದು ಎಂದರು.ಡಾ. ಶಿವಾನಂದ ಗಾಳಿ ಅಧ್ಯಕ್ಷತೆ ವಹಿಸಿದ್ದರು. ಪಂ. ಸೋಮಶೇಖರ ಮರಡಿಮಠ ವಚನ ಗಾಯನ ಪ್ರಸ್ತುತಪಡಿಸಿದರು. ವಿಶ್ವನಾಥ ಚೌಶೆಟ್ಟಿ ಸ್ವಾಗತಿಸಿದರು. ಡಾ. ಸಿ.ಎಸ್.ಅಂಗಡಿ ಪರಿಚಯಿಸಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry