ಸೋಮವಾರ, ಮೇ 10, 2021
20 °C

ಬಸವಣ್ಣನ ಸಮಾನತೆಯ ಕ್ರಾಂತಿ ಇಂದಿಗೂ ಅನನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: `12ನೇ ಶತಮಾನದಲ್ಲೇ ಸಾಮಾಜಿಕ ಸಮಾನತೆಯ ಕ್ರಾಂತಿ ಸಾರಿ ಲೋಕಮಾನ್ಯತೆ ಗಳಿಸಿದ ಮಹಾನ್ ಚೇತನ ಕ್ರಾಂತಿಯೋಗಿ ಜಗಜ್ಯೋತಿ ಬಸವಣ್ಣ~ ಎಂದು ಶಾಸಕ ಬಿ.ಪಿ. ಹರೀಶ್ ಬಣ್ಣಿಸಿದರು.

ತಾ.ಪಂ. ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಮಂಗಳವಾರ ನಡೆದ ಬಸವ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಾತಿ ಸಂಕೋಲೆಗಳ ಸಂಕುಚಿತ ಭಾವನೆಗಳಿಂದ ಎಲ್ಲರೂ ಹೊರ ಬರಬೇಕು. ಮನುಜ ಮತ ವಿಶ್ವ ಪಥ ಎಂಬ ಸಂದೇಶವನ್ನು ಸಾರಿದ್ದು ಮಾತ್ರವಲ್ಲದೇ ಆಚರಣೆಯಲ್ಲೂ ತೋರಿಸಿದರು. ನುಡಿದಂತೆ ನಡೆಯುವುದೇ ಧರ್ಮ ಎಂಬ ಸರಳ ತತ್ವದ ಮೂಲಕ ಸಾಮಾಜಿಕ ಬದ್ಧತೆ ಹಾಗೂ ಸಮಾನತೆ ಮಂತ್ರ ನೀಡಿದರು. ಅಂದು ನಡೆದ ಸಮಾನತೆಯ ಕ್ರಾಂತಿ ಇಂದಿಗೂ ಮಾದರಿಯಾಗಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೇ ಇಡೀ ಜಗತ್ತಿನಲ್ಲಿ ತಮ್ಮ ವಚನಗಳ ಮೂಲಕ ಪೂಜನೀಯರಾಗಿದ್ದಾರೆ ಎಂದರು.ಬಸವಣ್ಣ ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ವಚನ ಸಾಹಿತ್ಯದ ಅಧ್ಯಯನದಿಂದ ಮನುಷ್ಯ ಮಾತ್ರವಲ್ಲದೇ ಸಕಲ ಜೀವಿಗಳಿಗೂ ಒಳ್ಳೆಯದನ್ನು ಬಯಸುವ ಭಾವ ಜಾಗೃತವಾಗಿರುತ್ತದೆ. ಸಮಾನತೆಯಿಂದ ಜಗತ್ತನ್ನು ಮತ್ತಷ್ಟು ಸುಂದರವಾಗಿಸಬಹುದು ಎಂಬುದನ್ನೇ ವಚನ ಸಾಹಿತ್ಯ ಸಾರುತ್ತದೆ. ಪ್ರತಿಯೊಬ್ಬರೂ ಬಸವಣ್ಣ ಅವರ ವಚನದ ಆದರ್ಶ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ತಾ.ಪಂ. ಅಧ್ಯಕ್ಷೆ ಸುಶೀಲಮ್ಮ ಕರಿಬಸಪ್ಪ, ನಗರಸಭಾ ಅಧ್ಯಕ್ಷ ವಿಶ್ವನಾಥ ಭೂತೆ, ಉಪಾಧ್ಯಕ್ಷೆ ಹೊನ್ನಮ್ಮ ಕೊಂಡಜ್ಜಿ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕೊಟ್ರೇಶ್, ನಗರಸಭಾ ಸದಸ್ಯರಾದ ಶಿವಗಂಗಮ್ಮ, ನಗೀನಾ ಸುಭಾನ್, ತಹಶೀಲ್ದಾರ್ ಜಿ. ನಜ್ಮಾ, ತಾ.ಪಂ. ಇಒ ಎಚ್.ಎನ್. ರಾಜ್, ಪೌರಾಯುಕ್ತ ಎಂ.ಕೆ. ನಲವಡಿ, ಸಿಪಿಐ ನಾಗೇಶ್ ಐತಾಳ್, ಬಿಇಒ ಬಿ.ಆರ್. ಬಸವರಾಜಪ್ಪ, ಸಿಡಿಪಿಒ ಚಂದ್ರಪ್ಪ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಹೊಸಪೇಟೆ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಬಸವಣ್ಣ ಅವರ ಭಾವಚಿತ್ರದ ಹಾಗೂ ಅಲಂಕೃತ ಎತ್ತುಗಳ ಮೆರವಣಿಗೆಗೆ ಶಾಸಕ ಬಿ.ಪಿ. ಹರೀಶ್ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.ಮೆರವಣಿಗೆಯಲ್ಲಿ ಟಿ. ಜಯದೇವಪ್ಪ, ಟಿ.ಜೆ. ಮುರುಗೇಶಪ್ಪ, ಶಾಂತವೀರಪ್ಪ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.ನಗರಸಭೆಯಲ್ಲಿ ಬಸವ ಜಯಂತಿ

ನಗರಸಭೆಯಲ್ಲಿ ಮಂಗಳವಾರ ಬೆಳಿಗ್ಗೆ ಬಸವೇಶ್ವರ ಜಯಂತಿ ಆಚರಿಸಲಾಯಿತು. ನಗರಸಭೆ ಅಧ್ಯಕ್ಷ ವಿಶ್ವನಾಥ ಭೂತೆ, ಪೌರಾಯುಕ್ತ ಎಂ.ಕೆ. ನಲವಡಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.