ಬಸವಣ್ಣೆಪ್ಪಾ ಕಂಬಾರಗೆ ಒಲಿದ: ಛಂದ ಪುಸ್ತಕ ಬಹುಮಾನ

7

ಬಸವಣ್ಣೆಪ್ಪಾ ಕಂಬಾರಗೆ ಒಲಿದ: ಛಂದ ಪುಸ್ತಕ ಬಹುಮಾನ

Published:
Updated:

ಬೆಂಗಳೂರು: ಕತೆಗಾರ ಬಸವಣ್ಣೆಪ್ಪಾ ಕಂಬಾರ ಅವರ ಕಥಾಸಂಕಲನದ ಹಸ್ತಪ್ರತಿಗೆ ಈ ಸಾಲಿನ `ಛಂದ ಪುಸ್ತಕ~ ಬಹುಮಾನ ಲಭಿಸಿದೆ. ಬೆಳಗಾವಿ ಜಿಲ್ಲೆಯ ಘೋಡಗೇರಿಯವರಾದ ಕಂಬಾರರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ಸಹ ಮೇಲ್ವಿಚಾರಕರಾಗಿದ್ದಾರೆ.`ಛಂದ ಪುಸ್ತಕ~ವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಮಾರ್ಚ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.ಈ ಸ್ಪರ್ಧೆಗೆ ಸುಮಾರು 61 ಹಸ್ತಪ್ರತಿಗಳು ಬಂದಿದ್ದವು. ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ತೀರ್ಪುಗಾರರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry