`ಬಸವಣ್ಣ' ಚಿತ್ರ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ

ಬುಧವಾರ, ಜೂಲೈ 17, 2019
24 °C

`ಬಸವಣ್ಣ' ಚಿತ್ರ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:

ವಿಜಾಪುರ: `ಬಸವಣ್ಣ' ಕನ್ನಡ ಚಲನ ಚಿತ್ರದಲ್ಲಿ ಬಸವೇಶ್ವರರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಈ ಚಿತ್ರ ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ನವ ನಿರ್ಮಾಣ ವೇದಿಕೆಯವರು ಗುರುವಾರ ಪ್ರತ್ಯೇಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನವ ನಿರ್ಮಾಣ ವೇದಿಕೆ: ನಿರ್ಮಾಪಕ ಶ್ರೀನಿವಾಸ್ ರಾಜು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಬಸವಣ್ಣನ ವೇಷಧಾರಿಯ ಕೈಯಲ್ಲಿ ಖಡ್ಗ ನೀಡಲಾಗಿದೆ. ಇದು ವಿಶ್ವಗುರು ಬಸವಣ್ಣನವರಿಗೆ ಮಾಡಿದ ದ್ರೋಹ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ನವ ನಿರ್ಮಾಣ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಶೇಷರಾವ ಮಾನೆ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲಾಬಕ್ಷ್ ಕಾಖಂಡಕಿ, ಎಂ.ಎಂ. ಖಲಾಸಿ, ಕೆ.ಎ. ಬೇಪಾರಿ, ಎಸ್.ಎಸ್. ಖಾದ್ರಿ ಇನಾಮದಾರ, ಸಂಗಮೇಶ ಜಾಧವ, ಸಿದ್ದು ಕಲ್ಲೂರ, ಸಿದ್ದು ಶಿಂಧೆ, ಶ್ರೀಶೈಲ ಬಡಚಿ, ಗಿರೀಶ ಕುಲಕರ್ಣಿ, ಮೆಹಬೂಬ ಮಾಲಬಾವಡಿ, ಶಿವಕುಮಾರ ಕಾಂಬಳೆ, ಉಮಾ ಉಡಚಣ, ಜಗದೀಶ್ ಪ್ರಭಾಕರ, ಅನುಸೂಯಾ ಮಠಪತಿ, ರುಕ್ಮಿಣಿ ಕುರಿ, ಶ್ರೀರಾಮ ಜೋಶಿ ಇತರರು ಉಪಸ್ಥಿತರಿದ್ದರು.ಕರವೇ: ಬಸವಣ್ಣ ಚಿತ್ರವನ್ನು ಕೂಡಲೇ ನಿಷೇಧಿಸಬೇಕು. ಚಿತ್ರ ನಿರ್ಮಾಪಕರು ನಾಡಿನ ಮಠಾಧೀಶರು, ಬಸವಾಭಿಮಾನಿಗಳ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ತಮ್ಮ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಉಪಾಧ್ಯಕ್ಷೆ ರೇಷ್ಮಾ ಪಡೇಕನೂರ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮುಲ್ಲಾ ಎಚ್ಚರಿಸಿದರು.ರಾಜು ಹರಕಾರಿ, ಮಹಾದೇವ ರಾವಜಿ, ಪ್ರಕಾಶ ಕುಂಬಾರ, ಶಂಕರಗೌಡ ಪಾಟೀಲ, ಅಮೃತಗೌಡ ಪಾಟೀಲ, ಈಶ್ವರ ಧಾರವಾಡಕರ, ದಸ್ತಗೀರ ಸಾಲೋಟಗಿ, ಪಯಾಜ್ ಕಲಾದಗಿ, ಭರತ್ ಕೋಳಿ, ಅಶೋಕ ಪಾಟೀಲ, ಸಂಜೀವ ಮುದ್ದೇಬಿಹಾಳ , ದಾದಾಪೀರ್ ಬಡೇಕಲ್, ಮೌನೇಶ ಬಡಿಗೇರ, ಮಲ್ಲು ಅಗಸರ ಇನ್ನಿತರರು ಉಪಸ್ಥಿತರಿದ್ದರು.ವಿಜಯೋತ್ಸವ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಿರುವುದನ್ನು ಸ್ವಾಗತಿಸಿ  ಕರ್ನಾಟಕ ರಕ್ಷಣಾ ವೇದಿಕೆಯವರು ಇಲ್ಲಿಯ ಗಾಂಧಿಚೌಕ್‌ನಲ್ಲಿ ವಿಜಯೋ ತ್ಸವ ಆಚರಿಸಿದರು.ಬಾಗೇವಾಡಿ ಬಂದ್ ಇಂದು

ಬಸವನಬಾಗೇವಾಡಿ: ವೀರ ಬಸವಣ್ಣ ಚಲನಚಿತ್ರದ ಪೋಸ್ಟರ್‌ಗಳಲ್ಲಿ ನಟ ಉಪೇಂದ್ರ ಅವರು ಧರಿಸಿರುವ ವೇಷ ಭೂಷಣಗಳು ಬಸವ ಭಕ್ತರಿಗೆ ನೋವು ಉಂಟು ಮಾಡಿದೆ. ಚಲನಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಿ ಜುಲೈ 19 ರಂದು ಬಸವನಬಾಗೇವಾಡಿ ಬಂದ್‌ಗೆ ಕರೆ ನೀಡಲು ಸ್ಥಳೀಯ ವಿರಕ್ತಮಠದಲ್ಲಿ ಗುರುವಾರ ಸಂಜೆ ನಡೆದ ವಿವಿಧ ಸಂಘಟನೆ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು.ಬೆಳಿಗ್ಗೆ 10ಕ್ಕೆ ಬಸವೇಶ್ವರ ದೇವಾ ಲಯದ ಮುಂಭಾಗದಿಂದ ಆರಂಭವಾಗುವ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸುವುದು. ಅಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ರಸ್ತೆತಡೆ ನಡೆಸಲಾಗುವುದು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟು ಹಾಗೂ ಶಾಲಾ ಕಾಲೇಜುಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವಿ ಮಾಡಿಕೊಳ್ಳಲಾಯಿತು.ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಲ.ರು.ಗೊಳಸಂಗಿ, ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಮುಖಂಡರಾದ ಸಂಗನಗೌಡ ಚಿಕ್ಕೊಂಡ, ಡಾ. ಮಹಾಂತೇಶ ಮಡಿಕೇಶ್ವರ, ಸಿದ್ರಾಮಪ್ಪ ರಂಜಣಗಿ ಇತರರು ಮಾತನಾಡಿದರು.ವಿರಕ್ತಮಠದ ಸಿದ್ಧಲಿಂಗದೇವರು ಅವರು ಸಭೆಯ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ಡಾ.ಸಿ.ಎಂ.ಮೇಟಿ, ಶಂಕರಗೌಡ ಬಿರಾದಾರ, ಎಸ್.ಎಸ್. ಝಳಕಿ, ಶ್ರೀಕಾಂತ ಕೊಟ್ರಶೆಟ್ಟಿ, ಎಸ್. ಬಿ. ಬಶೆಟ್ಟಿ, ಶ್ರೀಕಾಂತ ಪಟ್ಟಣಶೆಟ್ಟಿ, ಶಿವಪ್ರಸಾದ ಅಕ್ಕಿ, ಮಹಾಂತೇಶ ಸಾಸಬಾಳ, ಗುರುರಾಜ ಕನ್ನೂರ, ಗಂಗಾಧರ ಸೌದಾಗರ, ರಾಜು ದಿಂಡವಾರ, ವಿದ್ಯಾನಂದ ಹಿರೇಮಠ, ಸಾಬಣ್ಣ ಕುಂಬಾರ, ಕಾಶಿನಾಥ ಅವಟಿ, ಉಮೇಶ ಯರನಾಳ, ಬಾಲಚಂದ್ರ ಚಿಂಚೋಳಿ, ನೀಲಕಂಠ ಹೂಗಾರ ಸೇರಿ ದಂತೆ ಮುಂತಾದವರು ಭಾಗವಹಿ ಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry