ಭಾನುವಾರ, ಆಗಸ್ಟ್ 25, 2019
28 °C

ಬಸವತೀರ್ಥ ರಸ್ತೆ: ಸಂಚಾರಕ್ಕೆ ಸಂಕಷ್ಟ

Published:
Updated:

ಹುಮನಾಬಾದ್: ಹುಮನಾಬಾದ್- ಕಲ್ಲೂರ ಮಾರ್ಗದ ಬಸವತೀರ್ಥ ರಸ್ತೆ ಹಾಳಾಗಿದ್ದು, ದುರಸ್ತಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಧಾರ್ಮಿಕ ಕ್ಷೇತ್ರ ಬಸವತೀರ್ಥದ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಂದ ಜನ ಬರುತ್ತಾರೆ. ಆದರೆ, ರಸ್ತೆಯಲ್ಲಿಗುಂಡಿಗಳು ಮೂಡಿ ಹಲವು ದಿನ ಗತಿಸಿದರೂ ಪ್ರಗತಿ ಕಂಡಿಲ್ಲ. ವಾಹನಗಳು ಈ ಮಾರ್ಗದಲ್ಲಿ  ಸಾಗುವುದು ಕಷ್ಟಸಾಧ್ಯವಾಗಿದೆ.

`ಕಲ್ಲೂರವರೆಗೆ ತೆರಳುವ ಪ್ರಯಾಣಿಕರು ಜೀವಭಯದಿಂದ ಪ್ರಯಾಣಿಸುವುದು ಇಲ್ಲಿ ಸಾಮಾನ್ಯ. ಉತ್ತಮ ರಸ್ತೆ ಇದ್ದರೆ ಪರವಾಗಿಲ್ಲ. ಗುಂಡಿಗಳಿರುವ ರಸ್ತೆಯಲ್ಲಿ ಹೋಗಲೂ ನಾವು ಭಯ ಪಡುತ್ತಿದ್ದೇವೆ ಎನ್ನುತ್ತಾರೆ ಖಾಸಗಿ ವಾಹನಗಳ ಚಾಲಕರು.`ರಸ್ತೆ ಹದಗೆಟ್ಟು ವರ್ಷಗಳೇ ಗತಿಸಿವೆ. ಚಾಲಕರಿಗೆ ಆಗುತ್ತಿರುವ ತೊಂದರೆಗಳ ಮಾಹಿತಿ ಇದೆ. ರಸ್ತೆ ದುರಸ್ತಿಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಅನುದಾನ ಬಂದರೆ ಕಾಮಗಾರಿ ಆರಂಭಿಸಲಾಗುವುದು' ಎಂದು ಜಿ.ಪಂ. ಎಂಜಿನಿಯರ್ ಸಿ. ಎಸ್. ಪಾಟೀಲ ತಿಳಿಸಿದರು.

Post Comments (+)