ಸೋಮವಾರ, ಜೂನ್ 14, 2021
26 °C

ಬಸವನಗುಡಿಯಲ್ಲಿ ಗಿರಿಯಾಸ್ ಃ 27

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಕುತೂಹಲದಿಂದ ಕೂಡಿದ ಕಣ್ಣುಗಳು ಬಾಗಿಲಿನಾಚೆ ನೋಡುತ್ತಿದ್ದವು. ಒಂದು ಗಂಟೆ ಕಾಯಿಸಿ ನಿಧಾನವಾಗಿ ನಗುತ್ತಾ ಬಂದರು ರಾಘವೇಂದ್ರ ರಾಜ್‌ಕುಮಾರ್. ಅವರ ಹಿಂದೆ ಹಾಯ್ ಎಂದು ಉದ್ಗರಿಸುತ್ತಾ ಐಂದ್ರಿತಾ ರೇ ಸಹ ಒಳಗೆ ಕಾಲಿಟ್ಟರು. ತಲೆಗೆ ಪೇಟ ಹಾಕಿ ಹಣೆಗೆ ಕುಂಕುಮದ ಬಟ್ಟು ಇಟ್ಟು  ಇವರನ್ನು ಸ್ವಾಗತಿಸಿದ ಪರಿ ಮಾತ್ರ ನೋಡುಗರ ಕಣ್ಣಂಚನ್ನು ಸೆಳೆದಿತ್ತು.ಅಂದು ಬಸವನಗುಡಿ ಬಳಿ ಗಿರಿಯಾಸ್ ಅವರ `27ನೇ ಮಳಿಗೆ~ ಉದ್ಘಾಟನೆಯ ಸಮಯ. ಮಟ ಮಟ ಮಧ್ಯಾಹ್ನದ ಬಿಸಿ ನೆತ್ತಿ ಸುಡುತ್ತಿದ್ದರು. ಸಂಭ್ರಮಗಳಿಗೆ ಅಲ್ಲಿ ಯಾವ ಕೊರತೆಯೂ ಕಾಣುತ್ತಿರಲಿಲ್ಲ.ಬಿಳಿ ಟೀ-ಶರ್ಟ್‌ನಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ನಸುನಗುತ್ತಾ ಸುತ್ತಲೂ ಕಣ್ಣಾಡಿಸುತ್ತಿದ್ದರೆ, ಐಂದ್ರಿತಾ ಮಾತ್ರ ತಮ್ಮ ಕೇಶವಿನ್ಯಾಸವನ್ನು ಸರಿಪಡಿಸಿಕೊಳ್ಳುತ್ತಿದ್ದರು. ಕೂದಲಿನ ಆರೈಕೆ ಹಾಗೂ ನೇವರಿಕೆಯಲ್ಲಿಯೇ ನಿರತರಾಗಿದ್ದರು. ಆರಂಭೋತ್ಸವಕ್ಕೆ ಬಂದವರಲ್ಲಿ ಹಲವರು ಗೃಹೋಪಯೋಗಿ ಉಪಕರಣ,  ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳ ಖರೀದಿಗೆ ಆರಂಭಿಸಿದರು.`ನಾನು ಮೊದಲಿನಿಂದಲೂ ಗಿರಿಯಾಸ್‌ನಲ್ಲಿಯೇ ಶಾಪಿಂಗ್ ಮಾಡುವುದು. ನನಗೆ ಇಲ್ಲಿಯ ವಸ್ತುಗಳ ಮೇಲೆ ಎಲ್ಲಿಲ್ಲದ ನಂಬಿಕೆ. ಇಲ್ಲಿ ದುಬಾರಿ ಅನಿಸುವುದಿಲ್ಲ ಎಂದು ಬಸವನಗುಡಿಯಿಂದ ಬಂದ ರೀಮಾ ಹೇಳುತ್ತಾರೆ.`ನಾನು ಅಪ್ಪಾಜಿ ಇರುವಾಗ ಅವರ ಜೊತೆ ಗಿರಿಯಾಸ್‌ಗೆ ಬರುತ್ತಿದ್ದೆ. ನನಗೆ ಮನೆ ಸಾಮಾನುಗಳು ಅಷ್ಟಾಗಿ ಏನೋ ತಿಳಿಯಲ್ಲ. ಆದರೆ ಲ್ಯಾಪ್‌ಟಾಪ್ ಕೊಳ್ಳಬೇಕು ಅಂದುಕೊಂಡಿದ್ದೇನೆ~ ಎಂದು ರಾಘವೇಂದ್ರ ರಾಜ್‌ಕುಮಾರ್ ನುಡಿದರು.`ನಾವು ಮೊದಲಿನಿಂದಲೂ ಗ್ರಾಹಕರನ್ನು ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಂದಿದ್ದೇವೆ. ಇಲ್ಲಿ ಬೆಲೆಯೂ ದುಬಾರಿಯಲ್ಲ. 1971ರಲ್ಲಿ ನಾವು ಗಿರಿಯಾಸ್‌ನ ಮೊದಲ ಮಳಿಗೆ ಶುರುಮಾಡೆದೆವು. ಈಗ ಇದು 27ನೇ ಮಳಿಗೆ. ಬೆಂಗಳೂರಿನ ಜನತೆ ನೀಡಿದ ಪ್ರೀತಿ  ಎಂದಿಗೂ ಮರೆಯಲಾಗದು~ ಎನ್ನುತ್ತಾರೆ ಗಿರಿಯಾಸ್ ಎಂ.ಡಿ. ನವೀನ್ ಗಿರಿಯಾ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.