ಬಸವನಬಾಗೇವಾಡಿ ಸುತ್ತಮುತ್ತ ಮಳೆ

ಸೋಮವಾರ, ಜೂಲೈ 22, 2019
23 °C

ಬಸವನಬಾಗೇವಾಡಿ ಸುತ್ತಮುತ್ತ ಮಳೆ

Published:
Updated:

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಬುಧವಾರ ಮಧ್ಯಾಹ್ನ ಮಳೆಯಾಗಿದೆ.ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ  ಆರಂಭವಾದ ಜಿಟಿ ಜಿಟಿ ಮಳೆ ನಂತರ ಕೆಲ ಹೊತ್ತು ರಭಸದ ಮಳೆಯಾಯಿತು.ಮುಂಗಾರು ಬಿತ್ತನೆ ಮಾಡಿದ ರೈತರು ಮಳೆ ನಿರೀಕ್ಷೆಯಲ್ಲಿದ್ದರು. ಕಳೆದ ಎರಡು ಮೂರು ದಿನಗಳಿಂದ ಅಲ್ಪ ಪ್ರಮಾಣದ ಮಳೆ ಬರುತ್ತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹೀಗೆ ಮಳೆ ಮುಂದುವರಿದರೆ ಬಿತ್ತಿದ ಬೆಳೆಗಳಿಗೆ ಅನುಕೂಲವಾಗುತ್ತದೆ. ಅದರಿಂದ ಉತ್ತಮ ಬೆಳೆ ತೆಗೆಯಲು ಸಾಧ್ಯವಾಗುತ್ತದೆ ಎಂದು ರೈತರು ಆಶಯ ವ್ತಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry