ಶನಿವಾರ, ಮೇ 8, 2021
20 °C

ಬಸವೇಶ್ವರ ಜಯಂತಿ ಅದ್ದೂರಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ಹನ್ನೇರಡನೇ ಶತಮಾನದಲ್ಲಿ ಬಸವೇಶ್ವರರು ಮಹಾನ್ ಶರಣರಾಗಿ ಸಮಾಜದಲ್ಲಿನ ಜಾತೀಯತೆಯನ್ನು ಹೋಗಲಾಡಿಸಲು ಶ್ರಮಿಸಿದ್ದರು. ಅವರ ನೆನಪಿಗಾಗಿ ಏ. 24ರಂದು ಅದ್ದೂರಿಯಾಗಿ ಅವರ ಜಯಂತಿಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ತಿಳಿಸಿದರು.ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಬಸವೇಶ್ವರರ ಜಯಂತಿ ಆಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಂದು ಬಸವೇಶ್ವರ ಭಾವಚಿತ್ರವನ್ನು ಜಾನಪದ ಕಲಾ ತಂಡಗಳ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ನಂತರ ಸಾರ್ವಜನಿಕ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಜಯಂತಿ ಆಚರಣೆಗೆ ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.ಪ.ಪಂ. ಅಧ್ಯಕ್ಷೆ ಪುಷ್ಪಲತಾ, ಸದಸ್ಯೆ ಭಾರತಿ ಪ್ರಸಾದ್, ಮುಖ್ಯಾಧಿಕಾರಿ ಕೆ. ಪರಮೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಆರ್. ಕಮಲಾನಾಯ್ಕ, ವಲಯ ಅರಣ್ಯಾಧಿಕಾರಿ ವೀರಣ್ಣ ಮುಂತಾದವರು ಉಪಸ್ಥಿತರಿದ್ದರು.

ಆಸ್ತಿ ತೆರಿಗೆ ಪಾವತಿಗೆ ಸೂಚನೆ


ಹೊನ್ನಾಳಿ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸಮಸ್ತ ಆಸ್ತಿ ಮಾಲೀಕರು ಮತ್ತು ಅನುಭೋಗದಾರರು ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಏ. 30ರೊಳಗೆ ಪಾವತಿಸಬೇಕು ಎಂದು ಪ.ಪಂ. ಅಧ್ಯಕ್ಷ ಚಾಟಿ ಶೇಖರಪ್ಪ ಮತ್ತು ಮುಖ್ಯಾಧಿಕಾರಿ ಟಿ.ಎಲ್. ಮಂಜುನಾಥ್ ಕೋರಿದ್ದಾರೆ.ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಏ. 30ರೊಳಗೆ ಪಾವತಿಸಿದರೆ, ಶೇ. 5ರಷ್ಟು ರಿಯಾಯಿತಿ ನೀಡಲಾಗುವುದು. ಜೂನ್ 30ರವರೆಗೆ ಯಾವುದೇ ದಂಡ ಇರುವುದಿಲ್ಲ. ಜೂನ್ 30ರನಂತರ ಪಾವತಿಸಿದರೆ ಪ್ರತಿ ತಿಂಗಳು ಶೇ. 2ರಂತೆ ದಂಡ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.