ಭಾನುವಾರ, ಏಪ್ರಿಲ್ 18, 2021
32 °C

ಬಸವೇಶ್ವರ ನೀರಾವರಿ ಯೋಜನೆಗೆ ಶೀಘ್ರ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ: `ಮುಂಬರುವ ಚುನಾವಣೆ ಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಈ ಭಾಗದ ಬಹುದಿನಗಳ ಬೇಡಿಕೆ ಯಾಗಿರುವ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಆರಂಭಿಸಲು ಬದ್ಧವಾಗಿ ರುವುದಾಗಿ~ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಶ್ವಾಸನೆ ನೀಡಿದರು.ತಾಲ್ಲೂಕಿನ ಉಗಾರ ಖುರ್ದದ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜೆ.ಡಿ.ಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.`ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಜೆ.ಡಿ.ಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ, ಅಥಣಿ ಮತಕ್ಷೇತ್ರದಿಂದ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಕೆ. ಬುಟಾಳಿ ಹಾಗೂ ಕಾಗವಾಡ ಮತಕ್ಷೇತ್ರದಿಂದ ಅಥಣಿ ಫಾರ್ಮರ್ಸ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ ಪಾಟೀಲ ಕಣಕ್ಕಿಳಿಯುವುದು ನಿಶ್ಚಿತ~ ಎಂದು ಘೋಷಿಸಿದರು.ಇದಕ್ಕೂ ಮುನ್ನ ಕುಮಾರಸ್ವಾಮಿ ಅನಂತಪುರ ಮತ್ತು ಮದಭಾವಿ ಜಿ.ಪಂ.ಗಳ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.ಬಸನಗೌಡ ಪಾಟೀಲ, ಎ.ಬಿ. ಪಾಟೀಲ, ಅಶೋಕ ಪೂಜಾರಿ, ಲೀಲಾದೇವಿ ಪ್ರಸಾದ, ಉತ್ತಮ ಪಾಟೀಲ ಮತ್ತು ಅಜೀತ ಪಾಟೀಲ  ಇದ್ದರು.ಪುಕ್ಕಟೆ ಪೆಟ್ರೋಲ್

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ತಾಲ್ಲೂಕಿನ ಮದಬಾವಿ ಮತ್ತು ಅನಂತಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸಂಚರಿಸ ಲಿರುವ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಜೇವರ್ಗಿ -ಸಂಕೇಶ್ವರ ರಾಜ್ಯ ಹೆದ್ದಾರಿಗೆ ಹೊಂದಿ ಕೊಂಡಿರುವ ಕವಲಗುಡ್ಡ ಗ್ರಾಮದ ಬಳಿಯ ಬಂಕ್‌ವೊಂದರಲ್ಲಿ ಜೆಡಿಎಸ್ ಮುಖಂಡರು ಬೈಕ್‌ಗಳಿಗೆ ಪುಕ್ಕಟೆಯಾಗಿ 3 ಲೀ, ಪೆಟ್ರೋಲ್ ತುಂಬಿಸುತ್ತಿರುವುದು ಕಂಡು ಬಂದಿತು. ಈ ಸಂಗತಿ ಅರಿತ ಬಹು ತೇಕ ದಾರಿಹೋಕರು ಸಿಕ್ಕಿದ್ದೆ ಸಿರುಂಡೆ ಎಂಬಂತೆ ಪೆಟ್ರೋಲ್ ತುಂಬಿಸಿ ಕೊಳ್ಳಲು ಬಂಕ್ ಎದುರು ಪೈಪೋಟಿ ಗಿಳಿದಿದ್ದರಿಂದ ಸುಮಾರು ಒಂದು ಗಂಟೆಗೂ ಮಿಕ್ಕಿ ಈ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಕಂಡು ಬಂದಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.