ಬಸವೇಶ್ವರ ಪ್ರತಿಮೆಗೆ ಪುಷ್ಪವೃಷ್ಟಿ

7

ಬಸವೇಶ್ವರ ಪ್ರತಿಮೆಗೆ ಪುಷ್ಪವೃಷ್ಟಿ

Published:
Updated:
ಬಸವೇಶ್ವರ ಪ್ರತಿಮೆಗೆ ಪುಷ್ಪವೃಷ್ಟಿ

ಬೀದರ್: ಹೆಲಿಕಾಪ್ಟರ್ ಮೂಲಕ ಬಸವೇಶ್ವರ ಪ್ರತಿಮೆಗೆ ಪುಷ್ಟವೃಷ್ಠಿ ಮಾಡಿದ್ದು ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ವಚನ ಸಾಹಿತ್ಯದ ಮೆರವಣಿಗೆಯ ಪ್ರಮುಖ ಆಕರ್ಷಣೆ ಆಗಿತ್ತು. ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಠಿ ಮಾಡಲಾಗುತ್ತದೆ ಎಂದು ಆಯೋಜಕರು ಮುಂಚಿತವಾಗಿಯೇ ಪ್ರಕಟಿಸಿದ್ದರಿಂದ ಜನ ಆ ಕ್ಷಣಕ್ಕಾಗಿ ಕಾತರರಾಗಿದ್ದರು. ಬಸವೇಶ್ವರ ವೃತ್ತದ ಬಳಿ ಸೇರಿದ್ದ ಸಾವಿರಾರು ಆಕಾಶದತ್ತ ಕಣ್ಣು ನೆಟ್ಟಿದ್ದರು.ಜನರ ನಿರೀಕ್ಷೆಯಂತೆ ಸದ್ದು ಮಾಡುತ್ತ ಬಂದ ಹೆಲಿಕಾಪ್ಟರ್ ಆಗಸದಿಂದಲೇ ಬಸವೇಶ್ವರರ ಪ್ರತಿಮೆಗೆ ಪುಷ್ಟವೃಷ್ಟಿ ಮಾಡಿತು. ಇದರಿಂದ ಪುಳುಕಿತರಾದ ಅಭಿಮಾನಿಗಳು ಘೋಷಣೆಗಳನ್ನು ಹಾಕಿದರು.ಪ್ರಸ್ತುತ ತಾಂಡವಾಡುತ್ತಿರುವ ಭಯೋತ್ಪಾದನೆ, ದ್ವೇಷ ಅಸೂಯೆ ಸಮಾಜದ ಅಭಿವೃದ್ಧಿ ಮಾರಕ ಆಗಿವೆ. ಬಸವತತ್ವದಿಂದ ಮಾತ್ರ ಇವುಗಳಿಗೆ ಪರಿಹಾರ ಪಡೆಯಲು ಸಾಧ್ಯವಿದೆ ಎಂದು ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಗೃಹ ಸಚಿವ ಆರ್. ಅಶೋಕ ಹೇಳಿದರು.ಬಸವತತ್ವ ಪ್ರಸಾರಕ್ಕಾಗಿ ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ಲಂಡನ್‌ಲ್ಲಿ ಬಸವೇಶ್ವರರ ಮೂರ್ತಿ ಸ್ಥಾಪನೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.ಹಿಂದೆ ಅನುಭವ ಮಂಟಪದಲ್ಲಿ ಶ್ರಮ ಸಂಸ್ಕೃತಿಗೆ ಬೆಲೆ ಇತ್ತು. ಆದರೆ, ಇಂದು ಆಲಸ್ಯ ಸಂಸ್ಕತಿಗೆ ಜೋತು ಬಿದ್ದು ಯುವಕರು ಹಾಳಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಬಸವಣ್ಣನವರ ತತ್ವ ಮನೆ ಮನೆಗೆ ಮುಟ್ಟಿಸುವ ಕೆಲಸ ಆಗಬೇಕು ಎಂದು ಹೇಳಿದರು.ಬಸವಣ್ಣನವರ ಕಾಯಕತತ್ವ ಅಳವಡಿಸಿಕೊಂಡರೆ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಚಿತ್ರದುರ್ಗದ ಮುರುಘಾ ಶರಣರು ತಿಳಿಸಿದರು.

ಬಸವಣ್ಣ ದೇಶದ ಮಹಾನ್ ಪುರುಷರಲ್ಲಿ ಒಬ್ಬರು. ಅವರ ವಿಚಾರ ಕೇಳಿದ್ದೇನೆ. ಇಲ್ಲಿ ಜನಿಸಿರುವ ನೀವೆಲ್ಲರೂ ಪುಣ್ಯವಂತರು ಎಂದು ಚಿತ್ರನಟ ಆದಿತ್ಯ ಪಂಚೋಲಿ ಹೇಳಿದರು.ಬಸವಸೇವಾ ಪ್ರತಿಷ್ಠಾನ ಅಕ್ಕ ಅನ್ನಪೂರ್ಣ, ಮಾಜಿ ಸಚಿವರಾದ ಗುರುಪಾದಪ್ಪ ನಾಗಮಾರಪಳ್ಳಿ, ಭೀಮಣ್ಣ ಖಂಡ್ರೆ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ಸ್ವಾಗತ ಸಮಿತಿಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಪ್ರಧಾನ ಕಾರ್ಯದರ್ಶಿ ಡಾ. ಶೈಲೇಂದ್ರ ಬೆಲ್ದಾಳೆ ಮತ್ತಿತರರು ಉಪಸ್ಥಿತರಿದ್ದರು. ಬಸವಕೇಂದ್ರ ಕಾರ್ಯಾಧ್ಯಕ್ಷ ಶರಣಪ್ಪ ಮಿಠಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಪ್ರಭುರಾವ ವಸ್ಮತೆ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಸುರೇಶ ಚನ್ನಶೆಟ್ಟಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry