ಬಸವೇಶ್ವರ ಮೂರ್ತಿಗೆ ಕ್ಷೀರಾಭಿಷೇಕ

7

ಬಸವೇಶ್ವರ ಮೂರ್ತಿಗೆ ಕ್ಷೀರಾಭಿಷೇಕ

Published:
Updated:
ಬಸವೇಶ್ವರ ಮೂರ್ತಿಗೆ ಕ್ಷೀರಾಭಿಷೇಕ

ಬಾಗಲಕೋಟೆ: ಯಡಿಯೂರಪ್ಪ  ಆಧುನಿಕ ಬಸವಣ್ಣ ಎಂದ ಸಚಿವ ರೇಣುಕಾಚಾರ್ಯ ಅವರ ಹೇಳಿಕೆ ಯನ್ನು ಖಂಡಿಸಿ   ಜೆಡಿಎಸ್ ಯುವ ಘಟಕದ ಕಾರ್ಯಕರ್ತರು ಸೋಮವಾರ ನಗರದಲ್ಲಿರುವ ಬಸವೇಶ್ವರ ಮೂರ್ತಿಯನ್ನು ಸ್ವಚ್ಛಗೊಳಿಸಿ ಕ್ಷೀರಾಭಿಷೇಕ ಮಾಡಿದರು.ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಮೂರ್ತಿಯನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ  ಜೆಡಿಎಸ್ ಯುವ ಕಾರ್ಯಕರ್ತರು ನಂತರ ಕ್ಷೀರಾಭಿಷೇಕ ನಡೆಸಿ, ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ ಗದ್ದಿ, ಸಚಿವ ರೇಣುಕಾಚಾರ್ಯ  ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಧುನಿಕ ಬಸವಣ್ಣ ಎಂದು ಹೇಳುವ ಮೂಲಕ ಬಸವಣ್ಣನಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.ಭ್ರಷ್ಟಾಚಾರ ಮತ್ತು ಹಗರಣದಲ್ಲಿ ಭಾಗಿಯಾಗುವ ಮೂಲಕ ಅಧಿಕಾರ ಕಳೆದುಕೊಂಡ ಯಡಿಯೂರಪ್ಪ ಅವರನ್ನು ಬಸವಣ್ಣನವಿಗೆ ಹೋಲಿಕೆ ಮಾಡುವುದು ಅಕ್ಷಮ್ಯ. ಈಗ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಮೂಲಕ ಬಸವಣ್ಣನವರಿಗೆ ಅಂಟಿದ್ದ ಕಳಂಕ ನಿವಾರಣೆಯಾಗಿದೆ ಎಂದರು.

ಬಸವಣ್ಣನಿಗೆ ಯಾರನ್ನೂ  ಹೋಲಿಕೆ ಮಾಡುವುದು ಒಳಿತಲ್ಲ,  ಭ್ರಷ್ಟ ಬಿಜೆಪಿ ನಾಯಕರು ಬಸವಣ್ಣನವರಿಗೆ ತಾವೇ ಹೋಲಿಕೆ ಮಾಡಿಕೊಳ್ಳುವುದು ಮೂರ್ಖತನ ಎಂದು ಹೇಳಿದರು.ಜೆಡಿಎಸ್ ಮುಖಂಡ ಘನಶಾಮ ಬಾಂಡಗೆ ಮಾತನಾಡಿ,  ಅಕ್ರಮ ಗಣಿ ಹಗರಣದ ಕುರಿತು ಲೋಕಾಯುಕ್ತರು ಸಲ್ಲಿಸಿರುವ ವರದಿ ಜಾರಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.  ರಾಜ್ಯ ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಭ್ರಷ್ಟಾ ಚಾರವನ್ನು ಯಡಿಯೂರಪ್ಪ ಎಸಗಿದ್ದಾರೆ. ಯಡಿಯೂರಪ್ಪ ಅವ ರೊಂದಿಗೆ ಸಚಿವ ಸಂಪುಟದ ಹಲವು ಸಚಿವರು ಅಕ್ರಮ ದಲ್ಲಿ ಭಾಗಿಯಾಗಿ ದ್ದಾರೆ ಎಂದು ಆರೋಪಿಸಿದರು.ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಹುರಕಡ್ಲಿ, ತಾಲ್ಲೂಕು ಅಧ್ಯಕ್ಷ ಅಶೋಕ ಲಾಗಲೋಟಿ, ಸಂಗಮೇಶ ಭಾವಿಕಟ್ಟಿ, ಶಿವು ಜಾಲಗಾರ, ಆನಂದ ಮಾನೆ, ಅಪ್ಪಾಸಾಹೇಬ ಮೋರೆ, ಜಿ.ಎನ್. ಸಿಂಧೂರ, ರಾಮಣ್ಣ ಪಾತ್ರೋಟ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry