ಬಸವೇಶ್ವರ ವಾಣಿಜ್ಯ ಕಾಲೇಜು ಚಾಂಪಿಯನ್

7

ಬಸವೇಶ್ವರ ವಾಣಿಜ್ಯ ಕಾಲೇಜು ಚಾಂಪಿಯನ್

Published:
Updated:

ಬಾಗಲಕೋಟೆ: ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಮಹಿಳಾ ಹಾಕಿ ಟೂರ್ನಿಯಲ್ಲಿ ನಗರದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.ನಗರದ ಬಿವಿವಿಎಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ ಫೈನಲ್‌ನಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜು ತಂಡವನ್ನು ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ತಂಡದ ಆಟಗಾರ್ತಿಯರು 1-0 ಗೋಲಿನಿಂದ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ತಂಡದ ಪರವಾಗಿ ಬಸಮ್ಮ ನಿರ್ಣಯಕ ಒಂದು ಗೋಲು ಬಾರಿಸಿದರು.ಟೂರ್ನಿಯ ಮೊದಲ ಪಂದ್ಯದಲ್ಲಿ ಬೆಳಗಾವಿ ಜೈನ್ ಕಾಲೇಜು ತಂಡದ ವಿರುದ್ಧ 2 ಗೋಲು ದಾಖಲಿಸುವ ಮೂಲಕ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಕಾಲೇಜು ತಂಡ ಜಯಗಳಿಸಿತು.ಎರಡನೇ ಪಂದ್ಯದಲ್ಲಿ ಬೆಳಗಾವಿಯ ಆರ್‌ಎಲ್‌ಎಸ್ ವಿರುದ್ಧ 3 ಗೋಲುಗಳನ್ನು ಬಾರಿಸುವ ಮೂಲಕ ಲಿಂಗರಾಜ ಕಾಲೇಜು ತಂಡ ಫೈನಲ್ ಪ್ರವೇಶಿಸಿತು.ಮೂರನೇ ಪಂದ್ಯದಲ್ಲಿ ಬೆಳಗಾವಿಯ ಜಿಎಸ್‌ಎಸ್ ಕಾಲೇಜು ತಂಡದ ವಿರುದ್ಧ ಬಾಗಲಕೋಟೆಯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಆಟಗಾರ್ತಿಯರು 2 ಗೋಲು ಬಾರಿಸಿ ಫೈನಲ್ ಪ್ರವೇಶಿಸಿದರು.ಟ್ರೋಪಿ ವಿತರಣೆ: ಬಿವಿವಿ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ ಮತ್ತು ಎನ್.ಜಿ. ಕೆರೂರ ಅವರು ಟೂರ್ನಿಯಲ್ಲಿ ಚಾಂಪಿಯನ್ ಆದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ತಂಡಕ್ಕೆ ಟ್ರೋಪಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎಸ್.ಪೂಜಾರ, ಶರಣ ನಾವಲಗಿ, ತರಬೇತುದಾರ ಎಸ್.ಕೆ.ಕಾಮಾ, ಕೆ.ಎಂ.ಬಾದವಾಡಗಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry